ವ್ಯಕ್ತಿಯೊಬ್ಬರು ಮನೆಗೆ ತರಲುತ್ತಿದ್ದ ಸಂದರ್ಭ ದಾರಿ ಮಧ್ಯೆ ಕಾಡಾನೆವೊಂದು ದಾಳಿ ನಡೆಸಿದ ಪರಿಣಾಮ ಕಾಲುಮುರಿತಕೊಳಗಾಗಿ ಆಸ್ಪತ್ರೆ ಸೇರಿರುವ ಘಟನೆ ನಾಪೋಕ್ಲು ಸಮೀಪದ ಕಕ್ಕಬ್ಬೆ ನಾಲಡಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಕಕ್ಕಬ್ಬೆ ನಾಲಡಿ ಗ್ರಾಮದ ಕಂಬೆಯಂಡ ಅನು ಸುಬ್ಬಯ್ಯ ಕಾಡಾನೆ ದಾಳಿಯಿಂದ ಕಾಲುಮುರಿ ತಕ್ಕೊಳಗಾದ ವ್ಯಕ್ತಿ. ಬುಧವಾರ ಸಂಜೆ ಕಕ್ಕಬ್ಬೆಯಿಂದ ನಾಲಡಿ ಗ್ರಾಮದಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ದಾರಿ ಮಧ್ಯೆ ಏಕಾಏಕಿ ಕಾಡಾನೆವೊಂದು ಸುಬ್ಬಯ್ಯ ಅವರ ಮೇಲೆ ದಾಳಿ ನಡೆಸಿದೆ. ಇದರಿಂದ ಅವರ ಕಾಲು ಮುರಿತಕ್ಕೊಳಗಾಗಿಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ ಹಾಗೂ ಬಾಚಮಂಡ ಲವ ಚಿಣ್ಣಪ್ಪ ಸುಬ್ಬಯ್ಯ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಕೆಲವು ತಿಂಗಳುಗಳಿಂದ ಕಕ್ಕಬ್ಬೆ,ನರಿಯಂದಡ ಚೆಯ್ಯಂಡಾಣೆ,ನೆಲಜಿ, ಪೇರೂರು ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು ಜನರು ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಕಾಡಿಗೆ ಗಟ್ಟುವ ಅಥವಾ ಸೆರೆ ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿ ಶಾಶ್ವತ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
✍️….ವರದಿ: ಝಕರಿಯ ನಾಪೋಕ್ಲು