Reading Time: < 1 minute
ಚೇರಂಬಾಣೆ: ಚೇರಂಬಾಣೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷರಾಗಿ ಬಾಚರಣಿಯಂಡ ಪಿ.ಸುಮನ್ ಅವರು ನಾಲ್ಕನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಉಪಾಧ್ಯಕ್ಷರಾಗಿ ಪೋಡನೋಳನ ಟಿ.ಶ್ರೀನಿವಾಸ್ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ನಿರ್ದೇಶಕರುಗಳಾಗಿ ಸಾಮಾನ್ಯ ವರ್ಗದಿಂದ ಅಯ್ಯಂಡ ಬಿ.ಬೆಳ್ಯಪ್ಪ, ಮುಕ್ಕಾಟಿ ಆರ್.ನಾಣಯ್ಯ, ಕುಂಞಳಿ ಪಿ.ಸಂತೋಷ್ ಕುಮಾರ್, ಕೂರನ ವಿ.ಕಿಶೋರ್ ಕುಮಾರ್, ಬಿಸಿಎಂ(ಬಿ) ಕೇಕಡ ಎಂ.ಸುಗುಣ, ಬಿ.ಸಿ.ಎಂ(ಎ) ನಾಳಿಯಮ್ಮಂಡ ಸಿ.ಜೀವನ್, ಸಾಮಾನ್ಯ ಮಹಿಳಾ ಕ್ಷೇತ್ರದಿಂದ ಕೂರನ ಸುಶೀಲ ಅಪ್ಪಾಜಿ, ಚಿಯಬೆರ ವೀಣಾ ಸೋಮಯ್ಯ, ಪರಿಶಿಷ್ಟ ಪಂಗಡದಿಂದ ಎಂ.ಕೆ.ವಸಂತ ಹಾಗೂ ಪರಿಶಿಷ್ಟ ಜಾತಿ ಎಂ.ಸರಸಮ್ಮ ಅವಿರೋಧವಾಗಿ ಆಯ್ಕೆಯಾದರು.
ಸಾಲಗಾರರಲ್ಲದ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತೊತ್ತಿಯನ ಎಸ್.ಚೇತನ್ ನಿರ್ದೇಶಕರಾಗಿ ಗೆಲವು ಸಾಧಿಸಿದರು. ಒಟ್ಟು 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆದ್ದುಕೊಂಡರು.