ಚೇರಂಬಾಣೆ: ಮಡಿಕೇರಿ ತಾಲೂಕಿನ ಬೇಂಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚೇರಂಬಾಣೆಯ ಅರುಣಾ ಜ್ಯೂನಿಯರ್ ಕಾಲೇಜು ಕೆಳಗಿನ ದ್ವಾರದ ಮುಂಭಾಗದಿಂದ ನೀರಿನ ಟ್ಯಾಂಕ್ ತೋಮಸ್ ಮನೆಯವರೆಗಿನ ರಸ್ತೆ , ಮಸೀದಿ ರಸ್ತೆಯಲ್ಲಿ ಪಟ್ಟಮಾಡ ಸತ್ಯ ಮನೆಯ ಮುಂಭಾಗದ ರಸ್ತೆಯನ್ನು ಸೇರಿಸಿ ಒಟ್ಟು 10ಲಕ್ಷದ ಕಾಮಗಾರಿಗೆ ರಸ್ತೆಯ ಅಭಿವೃದ್ದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಎಸ್.ಪೊನ್ನಣ್ಣ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಎ.ಎಸ್.ಪೊನ್ನಣ್ಣ ಈ ಭಾಗದಲ್ಲಿರುವ ಜನರ ಮೂಲಭೂತ ಸೌಲಭ್ಯಗಳನ್ನು ನನ್ನಿಂದಾಗುವ ಎಲ್ಲ ಪ್ರಯತ್ನ ಗಳಿಂದ ಮಾಡುತ್ತೇನೆ0ದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷ ರಾದ ಕೆ.ಎ.ಇಸ್ಮಾಯಿಲ್, ಪಂಚಾಯಿತಿ ಅಧ್ಯಕ್ಷೆ ಮಿಲನ್ ಮುತ್ತಣ್ಣ, ವಾರ್ಡಿನ ಸದಸ್ಯರುಗಳಾದ ಬಶೀರ್ ಕೆ. ಎಂ, ಬಿಂದು ಕೆ.ಕೆ, ಸೋಮಣ್ಣ ಬಿ.ಜಿ ಹಾಗೂ ವಲಯ ಅಧ್ಯಕ್ಷ ರಾದ ಕುಂಚೆಟ್ಟಿರ ರಮೇಶ್, ಪಕ್ಷದ ಹಿರಿಯರು, ಸಾರ್ವಜನಿಕರು, ಹಾಜರಿದ್ದರು.
ವರದಿ: ನೌಫಲ್ ಕಡಂಗ