ಕೊಟ್ಟಮುಡಿ ರಾಪ್ಟರ್ಸ್ ತಂಡಕ್ಕೆ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪ್ರಶಸ್ತಿ
ಹಬೀಬ ಕ್ರಿಕೆಟರ್ಸ್ ತಾವೂರ್ ತಂಡ ರನ್ನರ್ಸ್
ನಾಪೋಕ್ಲು: ಕುಂಜಿಲ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ 8ನೇ ವರ್ಷದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಟ್ಟಮುಡಿಯ ರಾಪ್ಟರ್ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ನಾಪೋಕ್ಲು ಬಳಿಯ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಆಕರ್ಷಕ ಫೈನಲ್ ಪಂದ್ಯಾಟದಲ್ಲಿ ಭಾಗಮಂಡಲ ತಾವೂರಿನ ಹಬೀಬ ಕ್ರಿಕೆಟರ್ಸ್ ತಂಡವನ್ನು ಮಣಿಸಿ ಕೊಟ್ಟಮುಡಿಯ ರಾಪ್ಟರ್ಸ್ ತಂಡ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹಬೀಬ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಕಳೆದ ನಾಲಕ್ಕು ದಿನಗಳಿಂದ ನಡೆದ ಪಂದ್ಯಾವಳಿಯಲ್ಲಿ ನಾಪೋಕ್ಲು ನಾಲ್ಕುನಾಡು ವಿಭಾಗದ ಸುಮಾರು 10 ತಂಡಗಳು ಪಾಲ್ಗೊಂಡಿದ್ದವು. ಪಂದ್ಯಾವಳಿಯಲ್ಲಿ ಉತ್ತಮ ಬ್ಯಾಟ್ಸ್ ಮೆನ್ ಮತ್ತು ಬೆಸ್ಟ್ ಕೀಪರ್ ಪ್ರಶಸ್ತಿಯನ್ನು ರಾಪ್ಟರ್ಸ್ ಕೊಟ್ಟಮುಡಿ ತಂಡದ ಸಂದೇಶ್ ರೈ ಪಡೆದುಕೊಂಡರು. ಸರಣಿ ಶ್ರೇಷ್ಠ ಮತ್ತು ಅಧಿಕ ಸಿಕ್ಸರ್ ಪ್ರಶಸ್ತಿಯನ್ನು ಸಿರಾಜ್ ಫ್ರೆಂಡ್ಸ್ ತಂಡದ ನವೀನ್ ಪಡೆದುಕೊಂಡರೆ,ಪಂದ್ಯಾವಳಿಯ ಆಲ್ರೌಂಡರ್ ಪ್ರಶಸ್ತಿಗೆ ಹಬೀಬ ತಂಡದ ಮೊಯ್ದು(ಅಣು) ಆಯ್ಕೆಯಾದರು.ಉತ್ತಮ ಬೌಲರ್ ಪ್ರಶಸ್ತಿಯನ್ನು ಹಬೀಬ ತಂಡದ ಕುಲದೀಪ್ ಪಡೆದರು. ಫೈನಲ್ ಪಂದ್ಯ ಪುರುಷೋತ್ತಮ ಮತ್ತು ಬಂದ್ಯಾವಳಿಯ ಬೆಸ್ಟ್ ಕ್ಯಾಚರ್ ಪ್ರಶಸ್ತಿಗೆ ಕೊಟ್ಟಮುಡಿ ರಾಪ್ಟರ್ಸ್ ತಂಡದ ರಶೀದ್ ಭಾಜನರಾದರು. ಪಂದ್ಯಾವಳಿಯ ತೀರ್ಪುಗಾರರಾಗಿ ಹನೀಫ್ ಮಡಿಕೇರಿ,ಅಭಿಷೇಕ್ ಹಾಕತ್ತೂರು ಕಾರ್ಯನಿರ್ವಹಿಸಿದರು. ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ನಂಜರಾಯಪಟ್ಟಣದ ಇಕ್ಬಾಲ್ ನೀಡಿದರು.
ಸಮಾರೋಪ ಸಮಾರಂಭ:
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಎ. ಇಸ್ಮಾಯಿಲ್, ಕಕ್ಕಬ್ಬೆ ವಿಎಸ್ಎಸ್ ಬ್ಯಾಂಕಿನ ಸದಸ್ಯ ಬಡಕಡ ಸುರೇಶ್,ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಸ ಕೊಟ್ಟಮುಡಿ,ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಭಾರ ಉಪಪ್ರಾಂಶುಪಾಲ ಎಂ.ಎಸ್. ಶಿವಣ್ಣ ಮಾತನಾಡಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಈ ಸಂದರ್ಭ ವಕೀಲರಾದ ಕೋಡಿಮಣಿಯಂಡ ಕುಟ್ಟಪ್ಪ,ಕುಂಜಿಲ ಜಮಾಅತ್ ಅಧ್ಯಕ್ಷ ಸೌಕತ್ ಅಲಿ, ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಮಹಮ್ಮದ್ ಹಾಜಿ ಕುಂಜಿಲ,ನಾಪೋಕ್ಲು ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್,ರಾಜ್ಯ ಮಾಹಿತಿ ಹಕ್ಕು ಕಾರ್ಯಕರ್ತರ ವೇದಿಕೆ ಜಿಲ್ಲಾಧ್ಯಕ್ಷ ಕೆ. ಎ.ಹಾರಿಸ್,ಕುಂಜಿಲ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಸ್ತಫ, ಹಾರಿಸ್ ಕಾರಂಗೋಡ್,ಕಕ್ಕಬ್ಬೆ ಗ್ರಾ.ಪಂ. ಸದಸ್ಯ ಬಶೀರ್, ರಶೀದ್ ವಯಕೋಲ್, ಫೈನರಿ ಟೆಕ್ಸ್ ಟೈಲ್ಸ್ ಮಾಲಿಕ ಅಬ್ದುಲ್ ರಹ್ಮಾನ್,ಪಂದ್ಯಾವಳಿಯ ಸ್ಥಾಪಕ ಅಬ್ದುಲ್ ಖಾದರ್ ನಾಪೋಕ್ಲು,ಪಂದ್ಯಾಟದ ಆಯೋಜಕರಾದ ಮೊಯ್ದು ಕುಂಜಿಲ, ಷರೀಫ್ ಕುಂಜಿಲ,ಕುಂಜಿಲ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು,ನಾಲ್ಕುನಾಡು ವಿಭಾಗದ ವಿವಿಧ ತಂಡಗಳ ಸದಸ್ಯರು, ಅಪಾರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಹಾಜರಿದ್ದರು.