“ಕಾಳುಮೆಣಸಿನಲ್ಲಿ ಸುಸ್ಥಿರ ಮತ್ತು
ಭವಿಷ್ಯದ ಉತ್ಪಾದನಾ ಪದ್ದತಿಗಳು” ಎಂಬ ವಿಷಯದ ಬಗ್ಗೆ ನಡೆದ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY-RAFTAAR) ಪ್ರಾಯೋಜಿತ “ಕಾಳುಮೆಣಸಿನಲ್ಲಿ ಸುಸ್ಥಿರ ಮತ್ತು ಭವಿಷ್ಯದ ಉತ್ಪಾದನಾ ಪದ್ದತಿಗಳು” ಎಂಬ ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವನ್ನು ದಿನಾಂಕ 19 ಮಾರ್ಚ್ 2024 ರಂದು ಐ. ಸಿ. ಎ. ಆರ್ – ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ, ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿಯು ಆಯೋಜಿಸಿತ್ತು.
ತರಬೇತಿ ಕಾರ್ಯಾಗಾರವನ್ನು ಐ.ಸಿ.ಎ.ಆರ್. ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಡಾ. ಎಂ. ಎಸ್. ಶಿವಕುಮಾರ್, ವಿಜ್ಞಾನಿಗಳು, ಐ. ಸಿ. ಎ. ಆರ್.-ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ ಇವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ರೀ. ಮೋಹನದಾಸ್, ಜಂಟಿ ನಿರ್ದೇಶಕರು, ಕಾಫಿ ಬೋರ್ಡ್ ಸಮಗ್ರ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆಯ ಆದ್ಯತೆಯನ್ನು ತಿಳಿಸಿದರು. ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥರಾದ ಡಾ. ರಾಜೇಂದ್ರನ್ ಇವರು ಮಾತನಾಡಿ ಸುಸ್ಥಿರ ಕೃಷಿ ಪದ್ದತಿಗಳ ಅಳವಡಿಕೆಯ ಪ್ರಾಮುಖ್ಯತೆ ಹಾಗೂ ಮಣ್ಣು ಮತ್ತು ನೀರಿನ ಮಾದರಿಗಳ ಪರೀಕ್ಷೆ ಮಾಡಿಸುವುದು ಆಗತ್ಯವೆಂದು ತಿಳಿಸಿದರು.
ಡಾ. ಎಸ್. ಜೆ. ಅಂಕೆಗೌಡ, ಮುಖ್ಯಸ್ಥರು, ಐ. ಸಿ. ಎ. ಆರ್.-ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಅಪ್ಪಂಗಳ, ಮಡಿಕೇರಿ ಇವರು ಮಾತಾನಾಡಿ ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರದ ಕಾಳುಮೆಣಸಿನ ಸಂಶೋಧನ ಕಾರ್ಯಗಳ ಬಗ್ಗೆ ಮತ್ತು ಕರ್ನಾಟಕದಲ್ಲಿ ಕಾಳುಮೆಣಸಿನ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು.
ತರಬೇತಿ ಕಾರ್ಯಾಗಾರದಲ್ಲಿ ಕಾಳುಮೆಣಸಿನ ತಳಿ ವೈವಿಧ್ಯತೆ, ಗುಣಮಟ್ಟದ ಸಸ್ಯಾಭಿವೃದ್ದಿ ವಿಧಾನಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು, ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಐ.ಸಿ.ಎ.ಆರ್.-ಐ.ಐ.ಎಸ್.ಆರ್, ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು. ಡಾ. ಹೊನ್ನಪ್ಪ ಆಸಂಗಿ, ವಿಜ್ಞಾನಿಗಳು, ಐ. ಸಿ. ಎ. ಆರ್.-ಐ. ಐ. ಎಸ್. ಆರ್., ಪ್ರಾದೇಶಿಕ ಕೇಂದ್ರ, ಇವರು ವಂದಿಸಿದರು. ಈ ತರಬೇತಿಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 130 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.