ಮಡಿಕೇರಿ: ಸ್ಥಳೀಯ ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು 23/03/2024 ರಂದು ಕೊಡಗು ಡಿಸಿಸಿ ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಪಟ್ಟಡ ಪ್ರೇಮ ಕರುಂಬಯ್ಯ ರವರ ಮನೆಯ ಆವರಣದಲ್ಲಿ ನಡೆಸಲಾಯಿತು.
ಶ್ರೀಮತಿ ರಾಣಿಅರುಣ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಪ್ಪನೆರವಂಡ ವಿಲೀನ ದೇವಯ್ಯ ನವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಬಗ್ಗೆ ಮಾತನಾಡುತ್ತಾ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಸದೃಡ ಭಾರತ ನಿರ್ಮಿಸುವಲ್ಲಿ ತಮ್ಮ ತಮ್ಮ ಜವಾಬ್ಧಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಶ್ರೀಮತಿ ಪಟ್ಟಡ ಪ್ರೇಮ ಕರುಂಬಯ್ಯ ನವರು ಮಾತನಾಡಿ ಮಹಿಳೆಯರು ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸ್ವಾಲಂಭಿಗಳಾಗುವಂತೆ ಅಭಿವೃದ್ಧಿಯತ್ತ ಮುನ್ನಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಪ್ರಯುಕ್ತ ಜನನಿ ಮಹಿಳಾ ಮಂಡಳಿಯ ಸದಸ್ಯರಿಗೆ ಹಾಗೂ ಮಹಿಳಯರಿಗೆ ರಸಪ್ರಶ್ನೆ ಕಾರ್ಯಕ್ರಮ, ವಿವಿಧ ರೀತಿಯ ಆಟಗಳನ್ನು ಏರ್ಪಡಿಸಲಾಗಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ ಅಸಿಸ್ಟೆಂಟ್ ಮ್ಯಾನೇಜರ್ ರಾದ ಶ್ರೀಮತಿ ನಾಳಿಯಮಂಡ ಸುಶೀಲಾ ಗಾಂಧಿ ರವರು ಅಥಿಗಳಾಗಿ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕರಾದ ಪಟ್ಟಡ ಕರುಂಬಯ್ಯನವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದ್ದರು. ಜನನಿ ಮಹಿಳಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ತಾಯಿರಾ ನಿರೂಪಿಸಿದರೆ, ಉಪಾಧ್ಯಕ್ಷರಾದ ಶ್ರೀಮತಿ ಹೇಮಾವತಿ ಪ್ರಸನ್ನ ರವರು ಸ್ವಾಗತಿಸಿ, ನಿರ್ದೇಶಕರಾದ ಶ್ರೀಮತಿ ಪ್ರೇಮ ಪ್ರಾರ್ಥಿಸಿ, ಖಜಾಂಚಿ ಶ್ರೀಮತಿ ಜಯಪಾಲಕ್ಷರವರು ವಂದಿಸಿದರು.