Reading Time: 4 minutes

ಬೇಲಿ

ಬೇಲಿ ಹೂತೋಟದ ಒಂದು ಮುಖ್ಯ ಭಾಗವಾಗಿದೆ. ಇವುಗಳನ್ನು ಗಡಿ ಗುರುತಿಸಲು ಮತ್ತು ಹೂತೋಟಗಳನ್ನು ವಿವಿಧ ಭಾಗವಾಗಿ ವಿಂಗಡಿಸಲು ಬಳಸುತ್ತಾರೆ. ಬೇಲಿಯ ಮುಖ್ಯ ಉದ್ಧೇಶ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ರೀತಿಯಾಗಿದ್ದು ಈ ಕೆಳಗಿನಂತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

• ರಕ್ಷಣೆ: ಪ್ರಾಣಿಗಳಿಂದ ಕಾಪಾಡಲು ಸಾಮಾನ್ಯವಾಗಿ ಮುಳ್ಳು ಗಿಡಗಳನ್ನು ಬಳಸಲಾಗುತ್ತದೆ.
• ಸುಂದರಗೊಳಿಸಲು: ಅಂದ ಕಾಣುವ ಗಿಡಗಳನ್ನು ಬಳಸಿ ಬೇಲಿ ಮಾಡಲಾಗುತ್ತದೆ. ಇವುಗಳ ಎಲೆಗಳು ಸುಂದರವಾಗಿದ್ದು ಸುವಾಸನೆಯುಕ್ತ ಹೂವು ಹೊಂದಿರುತ್ತದೆ.
• ಮುಚ್ಚಲು: ಬೇಗ ಬೆಳೆಯುವ ಗಿಡಗಳು ದಟ್ಟ ಎಲೆಗಳನ್ನು ಹೊಂದಿದ್ದು ಬೇಲಿಗಳ ಗಾತ್ರ ಎತ್ತರವಾಗಿರುತ್ತದೆ.

ಬೇಲಿ ಗಿಡದ ಆಯ್ಕೆ: ಅವಶ್ಯಕತೆ, ಮಣ್ಣು, ಹವಾಮಾನ, ನೀರಾವರಿಯ ಮೂಲ ಇತ್ಯಾದಿ ಮೇಲೆ ಬೇಲಿ ಗಿಡಗಳ ಆಯ್ಕೆ ಅವಲಂಬಿತವಾಗಿದೆ. ಸಾಮಾನ್ಯವಾಗಿ ಆ ಪ್ರದೇಶದಲ್ಲಿ ಸಿಗುವ ಗಿಡಗಳಿಂದ ಬೇಲಿಯನ್ನು ನಿರ್ಮಾಣ ಮಾಡಲಾಗುತ್ತದೆ. ದುರಾಂತ, ಕರಮಂಜಿ, ಚೈನಾರೋಸ್, ಲಂಟಾನ, ತುಜಾ ಮುಂತಾದ ಗಿಡಗಳನ್ನು ಬೇಲಿ ಗಿಡಗಳಾಗಿ ಬಳಸಲಾಗುತ್ತದೆ.

ಬೇಲಿಯ ನಿರ್ಮಾಣಕ್ಕೆ ಬಳಸುವ ಗಿಡಗಳು
ಹೆಸರು ಸಸ್ಯಾಭಿವೃದ್ಧಿ ವಿಧಾನ ಎತ್ತರ (ಮೀ)
ದುರಂತ ಕಡ್ಡಿ 0.75-1.50(ಮೀ)
ಕರಮಂಜಿ ಬೀಜ 0.75-2.0(ಮೀ)
ಎಕಲೀಫ ಕಡ್ಡಿ 0.75-1.50(ಮೀ)
ಮುಸಂಡ ಕಡ್ಡಿ 0.75-1.50(ಮೀ)
ನೇರಿಯಂ ಕಡ್ಡಿ 0.75-1.50(ಮೀ)
ಚೈನಾ ರೋಸ್ ಕಡ್ಡಿ 0.75-1.50(ಮೀ)
ಜಸ್ಟಿಸೀಯಾ ಕಡ್ಡಿ 0.75-1.50(ಮೀ)
ಇಕ್ಸೋರ ಕಡ್ಡಿ 0.75-1.50(ಮೀ)
ಎಲ್ಲೊ ನೆರಿಯಮ್ ಕಡ್ಡಿ 0.75-1.50(ಮೀ)
ಲಂಟಾನ ಬೀಜ ಮತ್ತು ಕಡ್ಡಿ 0.75-1.50(ಮೀ)

ಬೇಲಿ ಗಿಡಗಳ ನೆಡುವಿಕೆ:
ಮಣ್ಣು ತಯಾರಿ: ಒಳ್ಳೆಯ ಫಲವತ್ತಾದ ಮಣ್ಣು ಬೇಲಿ ಗಿಡಗಳ ಬೆಳವಣಿಗೆಗೆ ಹೆಚ್ಚು ಸೂಕ್ತವಾಗಿದೆ. ಮಣ್ಣು ಗಟ್ಟಿಯಾಗಿದ್ದರೆ ಇದರ ಬೆಳವಣಿಗೆ ಕುಂಠಿತವಾಗುತ್ತದೆ. ಸಾಮಾನ್ಯವಾಗಿ 1 ಮೀ ಆಳ 1 ಮೀ ಅಗಲದ ಗುಂಡಿ ತೆಗೆದು 2-3 ವಾರದ ಬಳಿಕ ಕೊಟ್ಟಿಗೆ ಗೊಬ್ಬರ ಮತ್ತು ಮಣ್ಣು ಸೇರಿಸಿ ಮುಚ್ಚಬೇಕು. ಮಣ್ಣಿನಲ್ಲಿ ಕಲ್ಲು ಅಥವಾ ಇನ್ನಿತ್ತರ ಬೇಡವಾದ ಪದಾರ್ಧಗಳಿದ್ದರೆ ಹೊಸ ಮಣ್ಣನ್ನು ಗುಂಡಿಯಲ್ಲಿ ತುಂಬಿ ನೀರನ್ನು ಹಾಕಬೇಕು. ಕೊಟ್ಟಿಗೆ ಗೊಬ್ಬರವಲ್ಲದೆ, 100 ಚದರ ಮೀಟರ್ ಪ್ರದೇಶಕ್ಕೆ 2.5 ಕೆ.ಜಿ ಯೂರಿಯ, 5 ಕೆ.ಜಿ ಸಿಂಗಲ್ ಸೂಪರ್ ಪಾಸ್ಫೇಟ್, 2.5 ಕೆ.ಜಿ ಪೊಟಾಷ್ ಬಳಸಿ ಬೇಲಿಗೆ ಗಿಡ ನೆಡುವ ಮೊದಲು ಗುಂಡಿಗೆ ಹಾಕಬೇಕು.

ಗಿಡ ನೆಡುವ ಸಮಯ: ಸಾಮಾನ್ಯವಾಗಿ ಸದಾ ಹಸಿರಾಗಿರುವ ಬೇಲಿ ಗಿಡಗಳನ್ನು ಮಳೆಗಾಲದಲ್ಲಿ ನೆಡಲಾಗುತ್ತದೆ. ಆದರೆ ಕೆಲವೊಮ್ಮೆ ವರ್ಷಕ್ಕೊಮ್ಮೆ ಎಲೆ ಉದುರಿಸುವ ಬೇಲಿ ಗಿಡಗಳನ್ನು ಫೆಬ್ರುವರಿ-ಮಾರ್ಚ್‍ನಲ್ಲಿ ನೆಡಲಾಗುತ್ತದೆ. ಸಾಮಾನ್ಯವಾಗಿ 30-40 ಸೆಂ ಮೀ ಅಂತರವಿಟ್ಟು ಗಿಡಗಳನ್ನು 1 ಸಾಲಿನಲ್ಲಿ ಅಥವಾ 2 ಸಾಲಿನಲ್ಲಿ ಬೇಲಿಗಳ ಉಪಯೋಗದ ಆಧಾರದ ಮೇಲೆ ನೆಡಲಾಗುತ್ತದೆ.

ಸಸ್ಯಾಭಿವೃದ್ಧಿ: ಬೀಜ, ಕತ್ತರಿಸಿದ ಕಡ್ಡಿ, ಲೇಯರಿಂಗ್, ಕಂದುಗಳ ಮುಖಾಂತರ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ. ಕರಮಂಜಿ, ಜಾಲಿ ಮುಂತಾದ ಗಿಡಗಳ ಬೀಜವನ್ನು ನೇರವಾಗಿ ಗುಂಡಿಗಳಲ್ಲಿ ಅಥವ ಪಾಲಿತೀನ್ ಚೀಲಗಳಲ್ಲಿ ಬಿತ್ತಲಾಗುತ್ತದೆ.
ಕಟ್ಟಿಂಗ್ಸ್: ಬೇಲಿ ಗಿಡಗಳನ್ನು ಹೆಚ್ಚು ಪಡೆಯಲು ಕಡ್ಡಿಗಳನ್ನು ಬಳಸಲಾಗುತ್ತದೆ. ಬೇಲಿ ಗಿಡಗಳು ಹೆಚ್ಚು ಹರಡಲು ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಕಡ್ಡಿಗಳನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ನೆಟ್ಟು ಬೇರು ಬಂದ ನಂತರ ನೆಡುವ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತದೆ.. ಕೆಲವೊಮ್ಮೆ ಲೇಯರಿಂಗ್ ಮತ್ತು ಕಂದುಗಳ ಮೂಲಕ ಸಸ್ಯಾಭಿವೃದ್ಧಿ ಮಾಡಲಾಗುತ್ತದೆ.

ಕಳೆ ನಿರ್ವಹಣೆ ಮತ್ತುನೀರಾವರಿ: ಪ್ರಾರಂಭದ ಹಂತದಲ್ಲಿ ಗಿಡಗಳ ಒಳ್ಳೆಯ ಬೆಳವಣಿಗೆಗೆ ಕಳೆ ನಿರ್ಮೂಲನೆ ಅವಶ್ಯ. ಕಳೆಯನ್ನು ಕಿತ್ತು ನಾಶಪಡಿಸುವುದು ಉತ್ತಮ. ಬೇಲಿ ಗಿಡಗಳ ಬೆಳವಣಿಗೆಗೆ ನೀರನ್ನು ಒದಗಿಸ ಬೇಕಾಗುತ್ತದೆ. ನೀರಿನ ಅವಶ್ಯಕತೆ ಹವಾಮಾನ, ಮಣ್ಣು ಮತ್ತು ಬೇಲಿ ಗಿಡದ ಮೇಲೆ ಅವಲಂಬಿತವಾಗಿದೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x