ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ- ಕೆ.ವಿ.ಕೆ ಸಲಹೆ

ವೈಜ್ಞಾನಿಕ ಬೋರ್ಡೊ ದ್ರಾವಣ ತಯಾರಿಕೆ ವಿಧಾನ- ಕೆ.ವಿ.ಕೆ ಸಲಹೆ

ಮಳೆಗಾಲದಲ್ಲಿ ತೋಟಗಾರಿಕಾ ಬೆಳೆಗಳಾದ ಕಾಫಿû, ಕಾಳುಮೆಣಸು, ಅಡಿಕೆ ಮತ್ತು ಶುಂಠಿ ಮುಂತಾದ ಬೆಳೆಗಳಿಗೆ ತಗಲುವ ಶಿಲೀಂದ್ರ ರೋಗಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸಲಾಗುತ್ತದೆ.

ಬೋರ್ಡೊ ದ್ರಾವಣ ಅಪಾಯಕಾರಿಯಲ್ಲದ ಬಹಳ ಉಪಯುಕ್ತವಾದ ಶಿಲೀಂದ್ರ್ರನಾಶಕ. ಆದರೆ ಇದನ್ನು ವೈಜ್ಞಾನಿಕವಾಗಿ ತಯಾರಿಸುವ ವಿಧಾನದಲ್ಲಿ ತಪ್ಪುಗಳಾದರೆ ರಸಸಾರದಲ್ಲಾಗುವ ವ್ಯತ್ಯಾಸದಿಂದ ಸಸ್ಯ ರೋಗಗಳು ಸಮರ್ಪಕವಾಗಿ ನಿರ್ವಹಣೆಯಾಗುವುದಿಲ್ಲ. ಅಲ್ಲದೆ ತಟಸ್ಥ ರಸಸಾರವಿಲ್ಲದ ದ್ರಾವಣವನ್ನು ಬೆಳೆಗಳ ಮೇಲೆ ಸಿಂಪರಣೆ ಮಾಡಿದಲ್ಲಿ ಎಲೆಗಳು ಸುಟ್ಟು ದುಷ್ಪರಿಣಾಮವಾಗುವುದು. ಆದುದರಿಂದ ವೈಜ್ಞಾನಿಕ ಪದ್ಧತಿಯಲ್ಲಿ ಬೋರ್ಡೊ ದ್ರಾವಣವನ್ನು ತಯಾರಿಸಿ ಸಿಂಪರಣೆ ಕೈಗೂಳ್ಳುವುದು ಪ್ರಸ್ತುತದಲ್ಲಿ ಅವಶ್ಯಕವಾಗಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೆಲವು ಪ್ರದೇಶಗಳಲ್ಲಿ ಕೃಷಿಕರು ಮೈಲುತುತ್ತು, ಸುಣ್ಣ ಮತ್ತು ನೀರನ್ನು ಲೆಕ್ಕಚಾರದಲ್ಲಿ ಬೆರಸದೆ, ದ್ರಾವಣದ ರಸಸಾರವನ್ನು (ಪಿ.ಹೆಚ್) ಪರೀಕ್ಷಿಸದೆ ಸಿಂಪರಣೆ ಮಾಡಿ ರೋಗದ ಹತೋಟಿಯಲ್ಲಿ ಯಶಸ್ಸು ಕಾಣದೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ.

ಮೈಲುತುತ್ತ್ತು ಅಂದರೆ ಶುದ್ಧ ತಾಮ್ರವನ್ನು ಗಂಧಕಾಮ್ಲದಲ್ಲಿ ಉಪಚರಿಸಿ ಅದನ್ನು ಹರಳು ರೂಪಕ್ಕೆ ತರಲಾದ ಉತ್ಪನ್ನ. ತಾಮ್ರವು ಶಿಲೀಂದ್ರಗಳಿಗೆ ವಿರುದ್ದವಾಗಿ ಕೆಲಸ ಮಡುತ್ತದೆ. ಘನ ಲೋಹವಾಗಿ ಕರಗದೆ ಇರುವ ಕಾರಣ ಅದನ್ನು ನೇರವಾಗಿ ಬಳಕೆ ಮಾಡಲಿಕ್ಕೆ ಬರುವುದಿಲ್ಲ. ಅದಕ್ಕಾಗಿ ಅದನ್ನು ಸಲ್ಫೇಟ್ ರೂಪಕ್ಕೆ ತಂದು, ಅದರ ಆಮ್ಲೀಯ ಗುಣವನ್ನು ತಗ್ಗಿಸಲು ಅದರೂಂದಿಗೆ ಸುಣ್ಣವನ್ನು ಸೇರಿಸಿ, ನೀರಿನೂಂದಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಲಾಗುತ್ತದೆ. ಅದನ್ನು ಸಸ್ಯದ ಹಸಿರು ಅಂಗಗಳು ವೇಗವಾಗಿ ಸ್ವೀಕರಿಸುತ್ತವೆ. ಆಮ್ಲೀಯಾವಾದ ಅಥವಾ ಹೆಚ್ಚು ಕ್ಷಾರೀಯವಾದ ದ್ರಾವಣವನ್ನು ಸಿಂಪಡಿಸಿದಾಗ ಹೀರಿಕೊಳ್ಳುವ ಗುಣ ನಿಧಾನವಾಗುತ್ತದೆ. ಇದರಿಂದ ರೋಗಗಳು ಸಮರ್ಪಕವಾಗಿ ಹತೋಟಿಗೆ ಬರುವುದಿಲ್ಲ. ಬೋರ್ಡೋ ದ್ರಾವಣದಲ್ಲಿರುವ ತಾಮ್ರ ಮತ್ತು ಸುಣ್ಣದ ಅಂಶಗಳು ಸಸ್ಯ ಬೆಳವಣಿಗೆಗೆ ಅಗತ್ಯವಾದ ಪೆÇೀಷಕಾಂಶಗಳಾಗಿರುವ ಕಾರಣ ಅದನ್ನು ಹೀರಿಕೊಳ್ಳುತ್ತವೆ. ಜೊತೆಗೆ ಎಲೆ, ಕಾಯಿಗಳ ಮೇಲೆ ಲೇಪಿತವಾಗಿ, ಹೀರಿಕೊಳ್ಳುವುದರಿಂದ ಶಿಲೀಂದ್ರದ ಸೋಂಕು ತಡೆಯಲ್ಪಡುತ್ತದೆ. ಮೇಲ್ಭಾಗದಲ್ಲಿ ಲೇಪಿತವಾದಗಲೂ ಶಿಲೀಂದ್ರದ ಪ್ರವೇಶಕ್ಕೆ ತಡೆಯಾಗುತ್ತದೆ.

ಬೋರ್ಡೊ ದ್ರಾವಣದ ಅನುಕೂಲಗಳು:- ಈ ದ್ರಾವಣದಿಂದ ತೋಟದ ಬೆಳೆಗಳಲ್ಲಿ ಕಂಡುಬರುವ ಅನೇಕ ಶಿಲೀಂದ್ರ ರೋಗಗಳನ್ನು ಹತೋಟಿ ಮಾಡಬಹುದು. ಈ ದ್ರಾವಣವನ್ನು ಸಿಂಪರಣೆ ಮಾಡಿದಾಗ ಸ್ವಾಭಾವಿಕವಾಗಿ ಬೆಳೆಯ ಹೂರ ಮೈಯಲ್ಲಿ ಅಂಟಿಕೊಳ್ಳುವುದರಿಂದ ಸುಮಾರು 30 ರಿಂದ 45 ದಿನಗಳವರೆಗೆ ಬೆಳೆಗೆ ರಕ್ಷಣೆ ನೀಡಬಲ್ಲದು. ಕಡಿಮೆ ಖರ್ಚಿನಿಂದ ಹೆಚ್ಚು ಪರಿಣಾಮಕಾರಿಯಾದ ಶಿಲೀಂದ್ರನಾಶಕ ದ್ರಾವಣ ತಯಾರಿಸಿ ಬಳಸಬಹುದು. ಸಿಂಪರಣೆ ಮಾಡುವವರ ಆರೋಗ್ಯದ ಮೇಲೆ ಇತರೆ ಶಿಲೀಂದ್ರನಾಶಕಗಳಿಗೆ ಹೋಲಿಸಿದರೆ ದುûಷ್ಪರಿಣಾಮಾಗಳು ತುಂಬಾ ಕಡಿಮೆ.

ಶೇ. 1 ರ ಬೋರ್ಡೊ ದ್ರಾವಣ ತಯಾರಿಸಲು ಬೇಕಾದ ವಸ್ತುಗಳು (100 ಲೀಟರ್ ನೀರು): ಮೈಲುತುತ್ತ 1 ಕೆ.ಜಿ., ಸುಣ್ಣ 1 ಕೆ.ಜಿ., ನೀರು 100 ಲೀಟರ್, ಸ್ವಚ್ಛವಾದ ಕಬ್ಬಿಣದ ತುಂಡು/ಚಾಕು/ಪಿ.ಹೆಚ್.ಪೇಪರ್, 10 ಲೀ. ಸಾಮರ್ಥ್ಯದ 2 ಪ್ಲಾಸ್ಟಿಕ್ ಬಕೆಟ್, 100 ಲೀ. ಸಾಮರ್ಥ್ಯದ 1 ಪ್ಲಾಸ್ಟಿಕ್ ಡ್ರಮ್/ಬ್ಯಾರಲ್

ತಯಾರಿಕೆ ವಿಧಾನ: ಒಂದು ಕೆ.ಜಿ. ಮೈಲುತುತ್ತವನ್ನು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟಿನಲ್ಲಿ ಸಂಪೂರ್ಣವಾಗಿ ಕರಗಿಸಬೇಕು. ಇನ್ನೊಂದು 10 ಲೀಟರ್ ನೀರಿರುವ ಪ್ಲಾಸ್ಟಿಕ್ ಬಕೆಟ್‍ನಲ್ಲಿ 1 ಕೆ.ಜಿ. ಸುಣ್ಣವನ್ನು ಸಂಪೂರ್ಣವಾಗಿ ಕರಗಿಸಬೇಕು. ಕರಗಿದ 10 ಲೀಟರ್ ಸುಣ್ಣದ ದ್ರಾವಣದಲ್ಲಿ ಸ್ವಲ್ಪ ಪ್ರಮಾಣದ ಸುಣ್ಣದ ದ್ರಾವಣವನ್ನು 80 ಲೀ. ನೀರಿರುವ 1 ಪ್ಲಾಸ್ಟಿಕ್ ಡ್ರಮ್‍ಗೆ ಸುರಿಯಬೇಕು. ನಂತರ 10 ಲೀಟರ್ ಮೈಲುತುತ್ತದ ದ್ರಾವಣವನ್ನು ನಿಧಾನವಾಗಿ ಸುರಿದು ಚೆನ್ನಾಗಿ ಕಲಸಬೇಕು. ನಂತರ ರಸಸಾರವನ್ನು ಪರೀಕ್ಷೆ ಮಾಡುತ್ತ ಸ್ವಲ್ಪ ಸ್ವಲ್ಪ ಉಳಿದ ಸುಣ್ಣದ ದ್ರಾವಣವನ್ನು ಸುರಿಯಬೇಕಾಗುತ್ತದೆ. ಸರಿಯಾದ ಶೇ.1 ರ ಬೋರ್ಡೊ ದ್ರಾವಣದ ಮಿಶ್ರಣವು ತಿಳಿ ನೀಲಿ ಬಣ್ಣದಾಗಿರುತ್ತದೆ.

ಬೋರ್ಡೊ ದ್ರಾವಣದ ಪರೀಕ್ಷೆ:-ತಯಾರು ಮಾಡಿದ ಮಿಶ್ರಣವು ಸರಿಯಾಗಿದೆಯೊ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲು ಒಂದು ಸ್ವಚ್ಛವಾದ ಚಾಕು ಅಥವಾ ಬ್ಲೇಡನ್ನು ಒಂದು ನಿಮಿಷ ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಒಂದು ವೇಳೆ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಕಂಡು ಬಂದರೆ, ತಯಾರಿಸಿದ ದ್ರಾವಣವು ಆಮ್ಲಯುುಕ್ತವಾಗಿದ್ದು ಅದನ್ನು ಸಿಂಪರಣೆ ಮಾಡಿದ್ದಲ್ಲಿ ಬೆಳೆಗಳಿಗೆ ಹಾನಿಕಾರಕ. ಆದುದರಿಂದ ಆ ದ್ರಾವಣವನ್ನು ತಟಸ್ಥ ರಸಸಾರಕ್ಕೆ ತರಲು ಇನ್ನೂ ಸ್ವಲ್ಪ ಸುಣ್ಣದ ತಿಳಿ ನೀರನ್ನು ಹಾಕಬೇಕು. ನಂತರ ಮತ್ತೆ ಪರೀಕ್ಷಿಸಿ ನೋಡಿದಾಗ ಚಾಕು ಅಥವಾ ಬ್ಲೇಡಿನ ಮೇಲೆ ಕಂದು/ಕೆಂಪು ಬಣ್ಣ ಇಲ್ಲದೆ ಹೊಳೆಯುತ್ತಿದ್ದರೆ ಈ ದ್ರಾವಣವು ಸರಿಯಾಗಿದ್ದು ಸಿಂಪರಣೆಗೆ ಸೂಕ್ತ ಎಂದು ತಿಳಿಯಬಹುದು.

ಕಿತ್ತಳೆ ಬಣ್ಣದ ಲಿಟ್ಮಸ್ ಕಾಗದವನ್ನು ಬೋರ್ಡೊ ದ್ರಾವಣದಲ್ಲಿ ಅದ್ದಿ ತೆಗೆದಾಗ ಕಿತ್ತಳೆ ಬಣ್ಣದ ಲಿಟ್‍ಮಸ್ ಕಾಗದವು ತಿಳಿನೀಲಿ ಬಣ್ಣಕ್ಕೆ ತಿರುಗಿದರೆ ಬೋರ್ಡೊ ದ್ರಾವಣ ಸರಿಯಾಗಿದೆ ಎಂದು ತಿಳಿಯುವುದು.

ಗಮನದಲ್ಲಿಡಬೇಕಾದ ಪ್ರಮುಖ ಅಂಶಗಳು: ಬೋರ್ಡೊ ದ್ರಾವಣ ತಯಾರಿಸಲು ಯಾವಾಗಲೂ ಮಣ್ಣಿನ ಅಥವಾ ಕಟ್ಟಿಗೆ ಅಥವಾ ಪ್ಲಾಸ್ಟಿಕ್ ಪಾತ್ರೆಗಳನ್ನು ಮಾತ್ರ ಉಪಯೋಗಿಸಬೇಕು. ಬೋರ್ಡೊ ದ್ರಾವಣವನ್ನು ಬಹಳ ಹೊತ್ತು ಇಟ್ಟಾಗ ತನ್ನ ಪರಿಣಾಮಕಾರಿಯನ್ನು ಕಳೆದುಕೊಳ್ಳುವುದರಿಂದ ದ್ರಾವಣವನ್ನು ತಯಾರಿಸಿದ ಕೂಡಲೇ ಉಪಯೋಗಿಸಬೇಕು. ಒಂದು ವೇಳೆ ಒಂದು ದಿನ ಇಟ್ಟು ಉಪಯೋಗಿಸುವುದಿದ್ದಲ್ಲಿ 250 ಗ್ರಾಂ ಬೆಲ್ಲವನ್ನು 100 ಲೀಟರ್ ದ್ರಾವಣಕ್ಕೆ ಬೆರೆಸಿ ಇಟ್ಟುಕೊಳ್ಳಬಹುದು.

ಬೋರ್ಡೊ ದ್ರಾವಣಕ್ಕೆ ಯಾವುದೇ ಪೀಡೆನಾಶಕಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡಬಾರದು. ಬೋರ್ಡೊ ದ್ರಾವಣವನ್ನು ಬಟ್ಟೆಯಲ್ಲಿ ಅಥವಾ ಸಣ್ಣ ಕಣ್ಣಿನ ಜರಡಿಯಲ್ಲಿ ಶೋಧಿಸಿ ಉಪಯೋಗಿಸಬೇಕು. ಹೆಚ್ಚು ಸುಣ್ಣ ಸೇರಿಸಿದರೆ ದ್ರಾವಣ ಕ್ಷಾರೀಯ ಗುಣ ಹೊಂದಿ ರಸಸಾರ 7 ಕ್ಕಿಂತ ಹೆಚ್ಚಾಗುವುದು ಹಾಗು ತಾಮ್ರದ ಮುಕ್ತ ವಿದ್ಯುದ್ವಾಹಿ ಕಣಗಳು ಕಡಿಮೆಯಾಗಿ ಶಿಲೀಂದ್ರನಾಶಕದ ಗುಣ ಕಡಿಮೆಯಾಗುತ್ತದೆ. ಬೋರ್ಡೊ ದ್ರಾವಣಕ್ಕೆ ಆಮ್ಲೀಯತೆ ಇರಬಾರದು. ಶುದ್ಧ ಸುಟ್ಟ ಸುಣ್ಣ ಅಥವಾ ಸ್ಪ್ರೇ ಸುಣ್ಣವನ್ನು ಉಪಯೋಗಿಸಬೇಕು. ಸಿಂಪರಣೆ ದ್ರಾವಣವನ್ನು ಆಗಾಗ್ಗೆ ಚೆನ್ನಾಗಿ ಕಲಕಿ ಬಳಸಬೇಕು.

ಪ್ರಮುಖ ತೋಟದ ಬೆಳೆಗಳ ರೋಗ ನಿರ್ವಹಣೆಯಲ್ಲಿ ಶೇ. 1 ರ ಬೋರ್ಡೊ ದ್ರಾವಣದ ಬಳಕೆ: ಬೆಳೆಗಳು ಕಾಫಿû-ಕೊಳೆ ರೋಗ, ತುಕ್ಕು ರೋಗ, ಅಡಿಕೆ-ಕೊಳೆರೋಗ, ಸುಳಿಕೊಳೆರೋಗ, ತೆಂಗು ಸುಳಿಕೊಳೆರೋಗ, ಕಾಂಡದಿಂದ ರಸಸೋರುವ ರೋಗ, ಕಾಳು ಮೆಣಸು-ಶೀಘ್ರ ಸೊರಗು ರೋಗ,ಚಿಬ್ಬು ರೋಗ (ಕೊತ್ತು ಉದುರುವುದು), ಶುಂಠಿ-ಗೆಡ್ಡೆ ಕೊಳೆರೋಗ, ಎಲೆಚುಕ್ಕೆರೋಗ.

ಈ ರೀತಿಯಾಗಿ ವೈಜ್ಞಾನಿಕ ವಿಧಾನದಿಂದ ಬೋರ್ಡೊ ದ್ರಾವಣವನ್ನು ರೈತರು ತಯಾರಿಸಿಕೊಂಡು ಉಪಯೋಗಿಸಿದಲ್ಲಿ ಉತ್ತಮ ರೀತಿಯಲ್ಲಿ ಬೆಳೆಗಳಲ್ಲಿ ಬರುವ ಶಿಲೀಂದ್ರ ರೋಗಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥರು, ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು, ಕೊಡಗು ಜಿಲ್ಲೆ, ದೂರವಾಣಿ: 08274-247274 ನ್ನು ಸಂಪರ್ಕಿಸಬಹುದು.

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments