ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೆಟ್ಟಳ್ಳಿ. Chettalli Primary Agricultural Credit Co-operative Society LTD., (PACCS-Chettalli)

Reading Time: 8 minutes

ನಂ. 2760 ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಚೆಟ್ಟಳ್ಳಿ

ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಚೆಟ್ಟಳ್ಳಿ. Chettalli Primary Agricultural Credit Co-operative Society LTD., (PACCS-Chettalli)

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  24.08.1976


ಸ್ಥಾಪಕ ಅಧ್ಯಕ್ಷರು: ಕೊಂಗೇಟಿರ ಅಪ್ಪಯ್ಯ 

ಹಾಲಿ ಅಧ್ಯಕ್ಷರು: ಬಲ್ಲಾರಂಡ ಮಣಿ ಉತ್ತಪ್ಪ

ಹಾಲಿ ಉಪಾಧ್ಯಕ್ಷರು: ಮರದಾಳು ಉಲ್ಲಾಸ  

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಎಸ್.‌ ನಂದಿನಿ 

ರೈತಾಪಿ ವರ್ಗದವರ ಏಳಿಗೆಯ ಧ್ಯೇಯದೊಂದಿಗೆ ದಿನಾಂಕ 24.08.1976 ರಲ್ಲಿ ಶ್ರೀ ಕೊಂಗೇಟಿರ ಅಪ್ಪಯ್ಯ ನವರಿಂದ ಸ್ಥಾಪಿಸಲ್ಪಟ್ಟ ಸಂಘವು ಚೇರಳ ಶ್ರೀಮಂಗಲ ಸಹಕಾರ ಸಂಘ ಮತ್ತು ಈರಳೆವಳಮುಡಿ ಸೇವಾ ಸಹಕಾರ ಸಂಘವನ್ನು ವಿಲೀನಗೊಳಿಸಿ ಚೆಟ್ಟಳ್ಳಿ ಪ್ಯಾಕ್ಸ್ ಆಗಿರುತ್ತದೆ. ಪ್ರಸ್ತುತ ಬಲ್ಲಾರಂಡ ಮಣಿಉತ್ತಪ್ಪನವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

# 2. ಸಂಘದ ಕಾರ್ಯವ್ಯಾಪ್ತಿ:- 

ಚೇರಳ, ಶ್ರೀಮಂಗಲ, ಕೂಡ್ಲೂರು ಚೆಟ್ಟಳ್ಳಿ ಮತ್ತು ಈರಳೆವಳಮುಡಿ ಗ್ರಾಮಗಳ ಕಾರ್ಯವ್ಯಾಪ್ತಿ

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.

2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
4.ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 
5.ಕ್ರಿಮಿನಾಶಕ ಸೇರಿದಂತೆ ಕೃಷಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಚೆಟ್ಟಳ್ಳಿ ಜನತೆಗೆ ದೂರದ ಊರುಗಳಿಗೆ ತೆರಳುವ ಕಷ್ಟ ತಪ್ಪಿದಂತಾಗಿದೆ. 
6. ಸಂಘದ ಮೂಲಕ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದೊಂದು ವಿನೂತನ ಪ್ರಯೋಗವಾಗಿದೆ. ಈ ಕ್ರಮದಿಂದ ಯುವ ಸಮೂಹ ಸ್ವಂತ ವಾಹನ ಹೊಂದಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ.
  

# 4. ಅಭಿವೃದ್ಧಿಯ ಮುನ್ನೋಟ:-

2007 ರಲ್ಲಿ ರೂ. 4.70 ಲಕ್ಷ ನಷ್ಟದಲ್ಲಿ ಸಾಗಿದ್ದ ಈ ಸಹಕಾರ ಸಂಘವನ್ನು ಬಲ್ಲಾರಂಡ ಮಣಿಉತ್ತಪ್ಪನವರು  ತಮ್ಮ ಹೋರಾಟ ಮನೋಭಾವ, ನೇರ-ದಿಟ್ಟ, ಕಠಿಣ ದೃಢ ಸಂಕಲ್ಪಗಳೊಂದಿಗೆ ಕಳೆದ 23 ವರ್ಷಗಳಿಂದ ಸಂಘದಲ್ಲಿ ತೊಡಗಿಸಿ ಕೊಂಡು ಕಳೆದ 3 ಅವಧಿಗಳಿಂದ ಅಧ್ಯಕ್ಷರಾಗಿದ್ದು, ಸಿಬ್ಬಂದಿ ವರ್ಗದವರ ಅಪಾರ ಪರಿಶ್ರಮದೊಂದಿಗೆ ಹಂತ ಹಂತವಾಗಿ ಮೇಲೇರಿಸುತ್ತಾ 2020 ರ ವೇಳೆಗೆ ರೂ. 31 ಲಕ್ಷಗಳಿಗೂ ಮೇಲ್ಪಟ್ಟು  ಲಾಭದೆಡೆಗೆ ಮುನ್ನಡೆಸಲು ಯಶಸ್ವಿಯಾಗಿದ್ದಾರೆ.

# 5 ಸಂಘದ ಸದಸ್ಯತ್ವ:- 

31-03-2020 ಕ್ಕೆ 1153 ಸದಸ್ಯರು

# 6. ಪಾಲು ಬಂಡವಾಳ:-

31-03-2020 ಕ್ಕೆ  1,17,45,030.00 ರೂಪಾಯಿ.

# 7. ಠೇವಣಿಗಳು:-

ಸಂಚಯ ಠೇವಣಿ


ನಿರಖು ಠೇವಣಿ

ಸಿಬ್ಬಂದಿ ವರ್ಗದ ಠೇವಣಿ

ಪಿಗ್ಮಿ ಠೇವಣಿ

# 8. ನಿಧಿಗಳು:- 

ಕ್ಷೇಮ ನಿಧಿ


ಕಟ್ಟಡ ನಿಧಿ

ಸವಕಳಿ ನಿಧಿ

ಮರಣ ನಿಧಿ

ಇತರೆ ನಿಧಿಗಳು

# 9. ಧನವಿನಿಯೋಗಗಳು:- 

ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ. ಪಾಲು ಹಣ


ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ. ಕ್ಷೇಮ ನಿಧಿ

ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ ಮುಖ್ಯ ಶಾಖೆ. ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಮಡಿಕೇರಿ ಕಾಲೇಜು ರಸ್ತೆ ಶಾಖೆ. ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಸಿದ್ದಾಪುರ ಶಾಖೆ. ನಿರಖು ಠೇವಣಿ

ಕೆಡಿಸಿಸಿ ಬ್ಯಾಂಕ್‌ ಕುಶಾಲನಗರ ಶಾಖೆ. ನಿರಖು ಠೇವಣಿ

ಇತರೆ ಸಂಸ್ಥೆಗಳಲ್ಲಿ ಪಾಲು ಹಾಗೂ ನಿರಖು ಠೇವಣಿ


# 10. ಸದಸ್ಯರಿಗೆ ವಿತರಿಸಿದ ಸಾಲ:- 

ಕೆ.ಸಿ.ಸಿ. ಫಸಲು ಸಾಲ

ಆಭರಣ ಈಡಿನ ಸಾಲ

ಆಸಾಮಿ ಸಾಲ

ವಾಹನ ಸಾಲ

ನಿರಖು ಠೇವಣಿ ಸಾಲ

ಪಿಗ್ಮಿ ಠೇವಣಿ ಆಧಾರದ ಸಾಲ

ಸ್ವಸಹಾಯ ಸಂಘ ಸಾಲ

ವ್ಯಾಪಾರ ಸಾಲ

ಸಿಬ್ಬಂದಿ ಭವಿಷ್ಯ ನಿಧಿ ಸಾಲ

ಜಾಮೀನು ಸಾಲ

ಗೊಬ್ಬರ ಸಾಲ

ಕರಿಮೆಣಸು ಅಡವು ಸಾಲ

ವಿದ್ಯಾಭ್ಯಾಸ ಸಾಲ

# 11. ಬ್ಯಾಂಕಿನ ವಹಿವಾಟು:- 

2019-20 ರಲ್ಲಿ ಸಂಘದ ಒಟ್ಟು ವಹಿವಾಟು: 1,12,60,15,325.00 ರೂಪಾಯಿಗಳು.


# 12. ಲಾಭಗಳಿಕೆ ಮತ್ತು ಲಾಭಾಂಶ ವಿತರಣೆ:- 

2020 ರ ವೇಳೆಗೆ ರೂ. 31 ಲಕ್ಷಗಳಿಗೂ ಮೇಲ್ಪಟ್ಟು  ಲಾಭ

# 13. ಗೌರವ ಮತ್ತು ಪ್ರಶಸ್ತಿ:- 

ಚೆಟ್ಟಳ್ಳಿ ಪಟ್ಟಣವನ್ನು ದೇವರನಾಡೆಂದು ಬಿಂಬಿಸಲೆಂಬಂತೆ  ಜಾತ್ಯಾತೀತವಾಗಿ, ರಾಜಕೀಯ ರಹಿತವಾಗಿ, ಸಂಪೂರ್ಣ ದೇಣಿಗೆಗಳಿಂದಲೇ ಮೂರ್ತಿಗಳನ್ನು ನಿರ್ಮಿಸಿರುವುದು  ಹೆಮ್ಮೆಯ ವಿಷಯವಾಗಿದೆ.  

ರಾಷ್ಟ್ರಪ್ರೇಮ,  ದೇಶಭಕ್ತಿಗಳ್ನು ಮೂಡಿಸಲೆಂಬಂತೆ ಚೆಟ್ಟಳ್ಳಿ ವಲಯದ ದೇಶಕ್ಕಾಗಿ ದುಡಿದ, ಗಡಿಯಲ್ಲಿ ಹೋರಾಡಿದ ಮಾಜಿ ಯೋಧರನ್ನು, ದೇಶದ ಆಂತರಿಕ ಭದ್ರತೆ, ಉಗ್ರವಾದಿ, ಆತಂಕವಾದಿಗಳ ದಮನದಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖಾ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಿದ ಹೆಗ್ಗಳಿಕೆಯೂ ಸಂಘದ ಆಡಳಿತ ಮಂಡಳಿಗಿದೆ. 

ಜಿಲ್ಲಾಮಟ್ಟದಲ್ಲಿ ಅಷ್ಟೇ ಅಲ್ಲ ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದಲೂ ಬಹುಮಾನ ಪಡೆದಿದೆ. 


# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

ಶೇಕಡ 100% ರಷ್ಟು

# 16. ಆಡಿಟ್ ವರ್ಗ:- 

“ಎ”  ತರಗತಿ

# 17. ಸಂಘದ ಸ್ಥಿರಾಸ್ತಿಗಳು:- 

ಸಂಘವು ಎರಡು ಶಾಖೆಗಳನ್ನು ಹೊಂದಿದ್ದು ಸಂಘದಲ್ಲಿ ಗೊಬ್ಬರ, ಹತ್ಯಾರು, ಸಿಮೆಂಟ್,  ಕೃಷಿ ಉಪಕರಣ ಮೊದಲಾದುವುಗಳನ್ನು  ಸ್ಪರ್ಧಾತ್ಮಕ  ದರದಲ್ಲಿ ಮಾರಾಟಮಾಡಲಾಗುತ್ತಿದೆ. ಪಡಿತರ ವಸ್ತುಗಳನ್ನು ಸಹ ವಿತರಣೆ ಮಾಡುತ್ತಿದೆ. ಗೊಬ್ಬರವನ್ನು ಚಿಲ್ಲರೆ ಹಾಗೂ ಸಗಟಾಗಿ ಮಾರಾಟ ಮಾಡ ಲಾಗುತ್ತಿದೆ.  ಗೊಬ್ಬರ  ದಾಸ್ತಾನು ಮಾಡಲು 250 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ಹೊಂದಿದೆ.
ಸಂಘವು  ನರೇಂದ್ರ ಮೋದಿ ಸಹಕಾರ ಭವನವನ್ನು ನಿರ್ಮಿಸಿದ್ದು ಸಭೆ ಸಮಾರಂಭಗಳಿಗೆ  ರಿಯಾಯಿತಿ ದರದಲ್ಲಿ   ಬಾಡಿಗೆ ನೀಡುತ್ತಿದ್ದು, ತಿಥಿ-ಕರ್ಮಾಂತರಗಳಿಗೆ ಉಚಿತವಾಗಿ ಸಭಾಂಗಣ ನೀಡಲಾಗುತ್ತಿದೆ.  ರೈತರ ಮನೆಯಲ್ಲಿ ನಡೆಸು ವಂತಹ ಕಾರ್ಯಕ್ರಮಗಳಿಗೆ ಶಾಮಿಯಾನ, ಪಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.  ಸಹಕಾರ ಭವನದ ಮುಂಭಾಗದಲ್ಲಿ ಮೂರು ವ್ಯಾಪರ ಮಳಿಗೆಯನ್ನು ಹೊಂದಿದ್ದು ಬಾಡಿಗೆಗೆ ಕೊಡಲಾಗಿದೆ. ಸದ್ರಿ ಕಟ್ಟಡದ ಕೆಳಭಾಗದಲ್ಲಿ ರಸಗೊಬ್ಬರ ಗೋದಾಮು ಅದಕ್ಕೆ ಹೊಂದಿಕೊಂಡಂತೆ ಸಿಮೆಂಟ್ ಗೋದಾಮು, ಅದರ ಪಕ್ಕದಲ್ಲಿ ಹತ್ಯಾರು ಸಾಮಾಗ್ರಿ ಮಾರಾಟ ಮಳಿಗೆ ಹಾಗೂ ಕಾಫಿ ಗುಣಮಟ್ಟ ಪರೀಕ್ಷಾ ಘಟಕವನ್ನು ಹೊಂದಿದೆ. 
ಸಹಕಾರ ಭವನದ ಮುಂಭಾಗದಲ್ಲಿ ಶ್ರೀ ಆಂಜನೇಯ, ಗಣಪತಿ, ಹಾಗೂ ಮಹಾವಿಷ್ಣು ಮೂರ್ತಿಗಳನ್ನು ಸ್ಥಾಪಿಸಿದ್ದು ಈ ಮೂರ್ತಿಗಳ ಪೂಜೆಗೆ ಸದಸ್ಯರ ಹಾಗೂ ಗ್ರಾಹಕರಿಗೆ ಅವರ ಸ್ವ ಇಚ್ಚೆಯಂತೆ ನಡೆಸಿಕೊಂಡು ಹೋಗಲು ಅನುವು ಮಾಡಿ ಕೊಡಲಾಗಿದೆ. ಸಂಘದ  ಮುಖ್ಯಕಛೇರಿ  ಮೇಲ್ಭಾಗದಲ್ಲಿ  ಪುಣ್ಯಕೋಟಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಮುಂಭಾಗದಲ್ಲಿ ಮೂರು ವ್ಯಾಪಾರ ಮಳಿಗೆ ಮದ್ಯಭಾಗದಲ್ಲಿ ಸಭಾಭವನ, ಹಿಂಭಾಗದಲ್ಲಿ ಹವಾನಿಯಂತ್ರಿತ ಮೂರು ಅತಿಥಿಗೃಹಗಳನ್ನು ನಿರ್ಮಿಸಲಾಗಿದೆ.  ಎಡಬಾಗದಲ್ಲಿ ಗೋಮಾತೆ ಮೂರ್ತಿ ಬಲ ಬಾಗದಲ್ಲಿ ಶ್ರೀಕೃಷ್ಣ  ಹಾಗೂ ಕಟ್ಟಡದ ಕೆಳಭಾಗ ಮುಖ್ಯ ಕಛೇರಿ  ಮುಂಭಾಗದಲ್ಲಿ  ಪಶುಪತಿನಾಥ ಮತ್ತು ಕಾವೇರಿ ಮೂರ್ತಿಗಳನ್ನು ನಿರ್ಮಿಸಲಾಗಿದೆ.   ಸಂಘದ ಮುಖ್ಯ ಕಛೇರಿ ಮುಂಭಾಗದಲ್ಲಿ  ಶುದ್ಧ  ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದ್ದು,  ಸದಸ್ಯರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ರೂ. 5ಕ್ಕೆ  20 ಲೀಟರ್ ನೀರನ್ನು ಕೊಡಲಾಗುವುದು.


# 18. ಸಂಘದ ಆಡಳಿತ ಮಂಡಳಿ:-

1. ಬಲ್ಲಾರಂಡ ಮಣಿ ಉತ್ತಪ್ಪ:  ಅಧ್ಯಕ್ಷರು

2. ಮರದಾಳು ಉಲ್ಲಾಸ:‌ ಉಪಾಧ್ಯಕ್ಷರು

3. ಪುತ್ತೇರಿರ ಎಂ. ಸೀತಮ್ಮ: ನಿರ್ದೇಶಕರು

4. ಕೊಂಗೇಟೀರ ರಾಣಿ ಕಾಳಪ್ಪ: ನಿರ್ದೇಶಕರು

5. ಕಣಜಾಲು ಪೂವಯ್ಯ: ನಿರ್ದೇಶಕರು

6. ಬಟ್ಟೀರ ಕೆ. ಅಪ್ಪಣ್ಣ: ನಿರ್ದೇಶಕರು

7. ಪೇರಿಯನ ಕೆ. ಪೂಣಚ್ಚ: ನಿರ್ದೇಶಕರು

8. ಧನಂಜಯ ಟಿ.ಎಸ್: ನಿರ್ದೇಶಕರು‌

9. ಬಿ. ಎಂ. ಕಾಶಿ: ನಿರ್ದೇಶಕರು‌
10. ಶಾಂತಪ್ಪ: ನಿರ್ದೇಶಕರು
11. ಬಿ.ಕೆ.ಸೀತಮ್ಮ: ನಿರ್ದೇಶಕರು
12. ನೂಜಿಬೈಲು ಡಿ. ನಾಣಯ್ಯ: ಪರಿಣಿತ ನಿರ್ದೇಶಕರು
13. ಅಡಿಕೇರ ಈ. ಮುತ್ತಪ್ಪ: ಪರಿಣಿತ ನಿರ್ದೇಶಕರು
14. ಅಜಿತ್ ವಿ.ಸಿ.:‌ ಆರ್ಥಿಕ ಬ್ಯಾಂಕಿನ ಪ್ರತಿನಿಧಿ
# 19. ಸಂಘದ ಸಿಬ್ಬಂದಿ ವರ್ಗ:-

1. ಶ್ರೀ ಹೆಚ್.ಬಿ. ರಮೇಶ್‌: ಆಂತರಿಕ ಲೆಕ್ಕ ಪರಿಶೋಧಕರು ಹಾಗೂ ಸಲಹೆಗಾರರು

2. ಶ್ರೀಮತಿ ಕೆ. ಎಸ್.‌ ನಂದಿನಿ: ಮುಖ್ಯಕಾರ್ಯನಿರ್ವಹಣಾಧಿಕಾರಿ

3. ಶ್ರೀಮತಿ ಹೆಚ್.ಸಿ. ಹರಿಣಿ: ಮಾರಾಟ ಗುಮಾಸ್ಥೆ

4. ಶ್ರೀಮತಿ ಎನ್.ಯು.: ಗುಮಾಸ್ಥೆ

5. ಶ್ರೀ ಬಿ.ಎ. ನಾಣಯ್ಯ: ಗುಮಾಸ್ಥ

6.‌ ಶ್ರೀ ಕೆ.ಹೆಚ್.‌ ಕಿಶೋರ್‌ ಹೊನ್ನಪ್ಪ: ಗುಮಾಸ್ಥ

7. ಶ್ರೀ ಎಸ್.ಬಿ. ದರ್ಶನ್: ಮಾರಾಟ ಗುಮಾಸ್ಥ

8.. ಶ್ರೀ. ಸಿ. ಹೇಮಂತ್:‌ ಅಟೆಂಡರ್

9. ಶ್ರೀ ಪಿ.ಎಸ್.‌ ಮುತ್ತಪ್ಪ: ಪಿಗ್ಮಿ ಏಜೆಂಟ್
# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 2760ನೇ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ

Chettalli Primary Agricultural Credit Co-operative Society LTD., (PACCS-Chettalli)

ಚೆಟ್ಟಳ್ಳಿ – 571248, ಕುಶಾಲನಗರ ತಾಲ್ಲೂಕು, ಕೊಡಗು ಜಿಲ್ಲೆ.

ದೂರವಾಣಿ: 08276-266673

Email: pacschettalli@gmail.com

Search Coorg Media

Coorg’s Largest Online Media Network 


About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.