ಮಡಿಕೇರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮತ್ತೊಂದು ಮಂಟಪ
ಶಾಂತಿನಿಕೇತನದ ಗಣೇಶನ ಮಂಟಪ
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಡಿಕೇರಿ ನಗರದ ಮೈಸೂರು ರಸ್ತೆಯ ಬದಿಯಲ್ಲಿರುವ ಶಾಂತಿನಿಕೇತನ ಬಡಾವಣೆಯಲ್ಲಿ ಕಳೆದ 36 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಶಾಂತಿನಿಕೇತನ ಯುವಕ ಸಂಘವು ಈ ವರ್ಷ ಮಡಿಕೇರಿ ದಸರಾ ದಶಮಂಟಪಗಳಿಗೆ ಸಮನಾದ ಮಂಟಪವನ್ನು ಹೊರಡಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ವರ್ಷದಿಂದ ವರ್ಷಕ್ಕೆ ಭಿನ್ನ-ವಿಭಿನ್ನ ರೀತಿಯಲ್ಲಿ ಗಣೇಶ ಮತ್ತು ಇತರ
ಕಲಾಕೃತಿಗಳನ್ನು ಪ್ರತಿಷ್ಠಾಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ‘ಶಾಂತಿನಿಕೇತನ ಯುವಕ ಸಂಘ’ವು ಈ ಬಾರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮಂಟಪವನ್ನು ಇಳಿಸಿ ದಸರಾ ದಶಮಂಟಪಗಳ ಹುಬ್ಬೆರಿಸುವಂತೆ ಮಾಡಿತು.
ಈ ಬಾರಿ ‘ಶ್ರೀ ಗಣೇಶ ಪುರಾಣದ ಶಮಂತಖೋಪಕ್ಯಾನ ಎಂಬ ಕಥಾ ಭಾಗವನ್ನು ಆಯ್ದುಕೊಂಡು, ಭಾದ್ರಪದ ಚೌತಿಯ ದಿನ ಚಂದ್ರನನ್ನು ನೋಡಿದ್ದರಿಂದ ಶ್ರೀ ಕೃಷ್ಣನಿಗೆ “ಶಮಂತಕಮಣಿ” ಯನ್ನು ಕದ್ದ ಆಪಾದನೆ ಬಂತು. ಆದರೆ ಸತ್ಯ ಏನೆಂದು ಲೋಕಕ್ಕೆ ತೋರಿಸಿಕೊಟ್ಟ ‘ಶ್ರೀ ಗಣೇಶನ’ ಆರಾಧನೆಯೊಂದಿಗೆ ಶ್ರೀ ಕೃಷ್ಣ ಪರಮಾತ್ಮ ತನ್ನ ಆರಾಧನೆಯನ್ನು ನೀಗಿಸಿಕೊಂಡ ಪ್ರಸಂಗವನ್ನು ಈ ಬಾರಿ ಕಲಾಕೃತಿಯಲ್ಲಿ ಅಳವಡಿಸಲಾಗಿತ್ತು.
ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಶಾಂತಿನಿಕೇತನ ಯುವಕ ಸಂಘದ “ಶಮಂತಖೋಪಕ್ಯಾನ” ಕಥಾ ಹಂದರದ ಭವ್ಯವಾದ ಮಂಟಪವನ್ನು ಸಂಘದ ಅಧ್ಯಕ್ಷ ಚೇತನ್‍ರವರ ಮಾರ್ಗದರ್ಶನದಲ್ಲಿ ಕಲಾವಿದರಾಗಿದ್ದ ದಿ.ಅಣ್ಣುರವರ ಪುತ್ರ ರವಿಯವರು ಕಲಾಕೃತಿಯನ್ನು ನಿರ್ಮಿಸಿದ್ದರು. ಕಲಾವಿದ ರÀವಿಯರ ಕೈಚಳಕದಲ್ಲಿ ಇಲ್ಲಿಯವರೆಗೆ ದಸರಾ, ಗಣೇಶೋತ್ಸವ, ಕಾವೇರಿ ಸಂಕ್ರಮಣದ ಮಂಟಪ, ಮಡಿಕೇರಿ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಬೃಹತ್ ಶಿವಾಲಯ ಮುಂತಾದ ಹತ್ತು ಹಲವು ಕಲಾಕೃತಿಗಳು ನಿರ್ಮಾಣಗೊಂಡಿದೆ. ರವಿಯವರೊಂದಿಗೆ ಸಹ ಕಲಾವಿದರಾದ ಸುರೇಶ್, ವಿನು, ರಾಜೇಶ್, ವರುಣ್, ಪಪ್ಪು, ಶೇಖರ್, ಮನು ಸತತ 2 ತಿಂಗಳಿಂದ ಶ್ರಮ ವಹಿಸಿ “ಶ್ರೀ ಗಣೇಶ ಪುರಾಣದ ಶಮಂತಖೋಪಕ್ಯಾನ ಕಥಾ ಹಂದರದ ಕಲಾಕೃತಿಗಳನ್ನು ನಿರ್ಮಿಸಿದರು. ಮಂಟಪದ ಸ್ಟುಡಿಯೋ ಸೆಟ್ಟಿಂಗ್‍ನ್ನು ಗುರು ಲೈಟಿಂಗ್ಸ್‍ನ ಲೋಕೇಶ್ ಮಾಡಿದರು. ಪೂಜಾ ಲೈಟಿಂಗ್ಸ್‍ನವರಿಂದ ಆರ್ಚ್‍ಲೈಟಿಂಗ್ಸ್ ಬೋರ್ಡ್ ಅಳವಡಿಸಲಾಗಿತ್ತು. ಮಂಟಪದ ಚಲನವಲನವನ್ನು ವಿಜಯ ಹಾಗೂ ಲಾರೆನ್ಸ್ ನಿರ್ವಹಿಸಿದರು.
ಶಾಂತಿನಿಕೇತನ ಯುವಕ ಸಂಘದ ಈ ಭವ್ಯ ಕಲಾಕೃತಿಯ ಮಂಟಪವು ಜನ-ಮನ ಸೂರೆಗೊಂಡು ಪ್ರಶಂಸೆಗೆ ಪಾತ್ರವಾಗಿದ್ದು, ಒಂದು ರೀತಿಯಲ್ಲಿ ಗಣೇಶೋತ್ಸವ ಕೂಡಾ ಮಡಿಕೇರಿಯಲ್ಲಿ ದಸರಾ ಜನೋತ್ಸವಕ್ಕೆ ಸರಿಸಾಟಿಯಾಗಿ ನಿಲ್ಲುವುದರತ್ತ ತನ್ನ ಹೆಜ್ಜೆಯನ್ನಿರಿಸುವುದು ಕಂಡು ಬಂತು. ಇದೆಲ್ಲಕ್ಕೂ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಚೇತನ್ ಮತ್ತು ಬಳಗದ ಪ್ರತಿಯೊಬ್ಬ ಸದಸ್ಯರ ಶ್ರಮ ಇಲ್ಲಿ ಶ್ಲಾಘÀನೀಯ. ಇವರ ಈ ಜನ ಮನೊರಂಜನೆಯ ಗಣೇಶೋತ್ಸವವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಭಿನ್ನ ರೀತಿಯಲ್ಲಿ ಮೂಡಿ ಬಂದು ಜನರ ಮನೋರಂಜನೆಗೆ ಸಾಕ್ಷಿಯಾಗಲಿ ಎಂಬುದೇ ನಮ್ಮ ಆಶಯ.
…ಮೀಡಿಯಾ ಕೂರ್ಗ್ ನ್ಯೂಸ್ ಡೆಸ್ಕ್