ಮುಳಿಯ ಜ್ಯುವೆಲ್ಸ್ ಚಿನ್ನೋತ್ಸವಕ್ಕೆ ಚಾಲನೆ

ಮಡಿಕೇರಿ: ಮುಳಿಯ ಜ್ಯುವೆಲ್ಸ್ ಮಡಿಕೇರಿಯಲ್ಲಿ ಇಂದು ಜೂನ್ 3ರ ವರೆಗೆ ನಡೆಯುವ ಚಿನ್ನೋತ್ಸವಕ್ಕೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇದರ ನಿವೃತ್ತ ಆಡಳಿತಾಧಿಕಾರಿಗಳಾದ ಬಿದ್ದಾಟ್ಟಂಡ ಮೇರಿ ನಾಣಯ್ಯ ಮತ್ತು ಸುಂಟಿಕೊಪ್ಪ ಮೂಲದ ಚಲನ ಚಿತ್ರ ನಟಿ ಸಿಂಧು ಲೋಕನಾತ್ ಅವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಸಂಸ್ಥೆಯ ಛೇರ್ಮನ್ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೇಶವ ಪ್ರಸಾದ್ ಮುಳಿಯ, ಮಡಿಕೇರಿ ಶಾಖೆಯ ವ್ಯವಸ್ಥಾಪಕರಾದ ಸೋಮಣ್ಣ ತೀತಿಮಾಡ, ಸಹ ವ್ಯವಸ್ಥಾಪಕ ಚಂದ್ರಶೇಖರ್, ಮಾರ್ಕೆಟಿಂಗ್ ಆಫೀಸರ್ ಸಂಜೀವ ಮತ್ತು ಅಪಾರ ಸಂಖ್ಯೆಯ ಗ್ರಾಹಕರು ಹಾಜರಿದ್ದರು.

I am text block. Click edit button to change this text. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

A.L.G Crescent School Madikeri

NOORUL ISLAM EDUCATIONAL SOCIETY
A.L.G Crescent School of Madikeri is a co-educational school was founded in 1992. The school is situated in Mahadevpet, Madikeri . The ALG family is run by the Noorul Islam Educational Society is a linguistic, regional, minority institution imparting quality education. Our parents and teachers firmly believe in the importance of a strong academic foundation coupled with equal stress on creative expression and social adaptability skills.

ವಿಧಾನಸಭಾ ಚುನಾವಣೆ; ನಿಷೇಧಾಜ್ಞೆ ಮೇ, 08 ರ ಸಂಜೆ 6 ಗಂಟೆಯಿಂದ ಮೇ, 11 ರ ಸಂಜೆ 6 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ

ಮಡಿಕೇರಿ ಏ.25: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಸಂಬಂಧ ಮತದಾನವು ಮೇ, 10 ರಂದು ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ನಡೆಯಲಿದೆ. ಜಿಲ್ಲೆಯಲ್ಲಿ ಪಾರದರ್ಶಕ, ಸುಗಮ ಮತ್ತು ಶಾಂತಿಯುತವಾಗಿ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ರ ಮತದಾನ ನಡೆಸುವ ಸಂಬಂಧ ಮತ್ತು ಈ ಅವಧಿಯಲ್ಲಿ ಜಿಲ್ಲೆಯಾದ್ಯಂತ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 126 ರಡಿ ವ್ಯಾಖ್ಯಾನಿಸಿದ ಅಂಶಗಳಂತೆ, ದಂಡ ಪ್ರಕ್ರಿಯಾ ಸಂಹಿತೆ 1973 ರ ಸೆಕ್ಷನ್ 144 ಮತ್ತು ದಂಡ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) 2005 ರ ಸೆಕ್ಷನ್ 144(ಎ)ರಡಿ ದತ್ತವಾದ ಅಧಿಕಾರದಂತೆ ಮೇ, 08 ರ ಸಂಜೆ 6 ಗಂಟೆಯಿಂದ ಮೇ, 11 ರ ಸಂಜೆ 6 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶಿಸಿದ್ದಾರೆ.
ಈ ಅವಧಿಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿ/ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪರ ಮತಯಾಚನೆ ನಡೆಸುವುದನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ರಾಜಕೀಯ ಸಭೆ-ಸಮಾರಂಭ ನಡೆಸುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ಇನ್ನಿತರೆ ಕಾರ್ಯಕ್ರಮ ನಡೆಸುವುದು, ಛಾಯಾಗ್ರಹಣ, ದೂರದರ್ಶನ ಅಥವಾ ಇತರ ರೀತಿಯ ಉಪಕರಣಗಳ ಮೂಲಕ ಯಾವುದೇ ಚುನಾವಣಾ ವಿಷಯವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದನ್ನು ನಿಷೇಧಿಸಿದೆ.
ಮಾರಕ ಆಯುಧಗಳನ್ನು ಹೊಂದಿರುವುದು ಅಥವಾ ಹಿಡಿದು ಓಡಾಡುವುದು, ಐದಕ್ಕಿಂತ ಹೆಚ್ಚಿಗೆ ಜನ ಗುಂಪು ಸೇರುವುದು/ ಸಂಚರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಎಲ್ಲಾ ಮತಗಟ್ಟೆಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿ ವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ, ಮತದಾರರ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ.
ಮತದಾನದ ದಿನವಾದ ಮೇ, 10 ರಂದು ಜಿಲ್ಲೆಯಾದ್ಯಂತ ಎಲ್ಲಾ ಸಂತೆ-ಜಾತ್ರೆಗಳನ್ನು ನಿಷೇಧಿಸಿದೆ. ಈ ಆದೇಶವು ಸರ್ಕಾರಿ ಕರ್ತವ್ಯದ ನಿಮಿತ್ತ ಹಾಗೂ ಮತಗಟ್ಟೆಗಳ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳು ಆಯುಧ/ ಬಂದೂಕುಗಳನ್ನು ಹೊಂದಿರುವುದಕ್ಕೆ ಹಾಗೂ ಬಳಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.

ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಜನ್ಮ ದಿನಾಚರಣೆ

ಮಡಿಕೇರಿ ಏ.24: ಡಾ.ರಾಜ್ ಕುಮಾರ್ ಅವರು ಪೌರಾಣಿಕ, ಸಾಮಾಜಿಕ, ಹಾಡುಗಾರಿಕೆ ಹೀಗೆ ಚಿತ್ರರಂಗದ ವಿವಿಧ ಕೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. 200 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ, ಪದ್ಮಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಕರ್ನಾಟಕ ರತ್ನ ಹೀಗೆ ಹತ್ತು ಹಲವು ಪ್ರಶಸ್ತಿಗಳು ಡಾ.ರಾಜ್‍ಕುಮಾರ್ ಅವರಿಗೆ ಹುಡುಕಿ ಬಂದವು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಸರಳವಾಗಿ ನಡೆದ ಡಾ.ರಾಜ್‍ಕುಮಾರ್ ಅವರ 95 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ.ರಾಜ್‍ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಡಾ.ರಾಜ್‍ಕುಮಾರ್ ಅವರ ಸರಳತೆ, ಕಲಾಪ್ರತಿಭೆ ಮತ್ತು ಜೀವನ ಶೈಲಿಯಿಂದ ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನಕ್ಕೆ ಬೆಳೆದರು ಎಂದು ವಿವರಿಸಿದರು.
1959 ರಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ಡಾ.ರಾಜ್‍ಕುಮಾರ್ ಕನ್ನಡ ಚಲನಚಿತ್ರ ರಂಗದಲ್ಲಿ ಸಾರ್ವಕಾಲಿಕ, ಚಲನಚಿತ್ರ ರಂಗದಲ್ಲಿ ಉತ್ತುಂಗಕ್ಕೆ ಏರಿದರೂ ಸಹ ಸರಳ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದರು. ಸಾಮಾಜಿಕ ಸಂದೇಶಗಳನ್ನು ನೀಡುವ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಡಾ.ರಾಜ್‍ಕುಮಾರ್ ಅವರಿಗೆ ಸಲ್ಲುತ್ತದೆ ಎಂದರು.
ಮುತ್ತುರಾಜ್ ಆಗಿ ಚಾಮರಾಜನಗರ ಜಿಲ್ಲೆಯ ಸಿಂಗನಲ್ಲೂರಿನಲ್ಲಿ 1929 ರಲ್ಲಿ ಜನಿಸಿ. ಚಲನಚಿತ್ರ ರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದರು. ಮೇರು ವ್ಯಕ್ತಿತ್ವ ಕಲಾ ಪ್ರತಿಭೆಯಿಂದ ಡಾ.ರಾಜ್‍ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರಿದರು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.
ನಾಡು-ನುಡಿ ವಿಷಯದಲ್ಲಿ ಸದಾ ಮುಂದಿರುತ್ತಿದ್ದ ಡಾ.ರಾಜ್‍ಕುಮಾರ್ ಅವರು ಗೋಕಾಕ್ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.
ಡಾ.ರಾಜ್‍ಕುಮಾರ್ ಬೇಡರ ಕಣ್ಣಪ್ಪ, ಭಕ್ತ ಕನಕದಾಸ, ರಣಧೀರ ಕಂಠೀರವ, ಸತ್ಯ ಹರಿಶ್ಚಂದ್ರ, ಇಮ್ಮಡಿ ಪುಲಿಕೇಶಿ, ಶ್ರೀಕೃಷ್ಣ ದೇವರಾಯ, ಭಕ್ತ ಕುಂಬಾರ, ಮಯೂರ, ಬಬ್ರುವಾಹನ, ಭಕ್ತ ಪ್ರಹ್ಲಾದ ಹೀಗೆ ಹಲವು ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನಸ್ಸಿನಲ್ಲಿ ಸದಾ ಇದ್ದಾರೆ ಎಂದು ವರ್ಣಿಸಿದರು.
ಡಾ.ರಾಜ್‍ಕುಮಾರ್ ಅವರು ಗಾಯಕರಾಗಿ, ಯಾರೇ ಕೂಗಾಡಲಿ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಹೇ.. ದಿನಕರ, ಹೃದಯ ಸಮುದ್ರ, ನಾದಮಯ ಹೀಗೆ ಹಲವು ಹಾಡುಗಳನ್ನು ಹಾಡಿ ರಾಷ್ಟ್ರೀಯ ಸಿನೆಮಾ ಪ್ರಶಸ್ತಿ ಪಡೆದಿದ್ದಾರೆ ಎಂದರು.
ಕನ್ನಡ ನಾಡು ನುಡಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಡಾ.ರಾಜ್ ಕುಮಾರ್ ಅವರು, ನಾಡಿನಲ್ಲಿ ಅಣ್ಣಾವ್ರು, ರಾಜಣ್ಣ ಎಂದು ಮನೆ ಮಾತಾಗಿದ್ದಾರೆ. ನಟ ಸಾರ್ವಭೌಮ, ಬಂಗಾರದ ಮನುಷ್ಯ, ವರನಟ ಎಂಬ ಬಿರುದನ್ನು ಪಡೆದಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ನುಡಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಬಾಲರಾಜ್ ರಂಗರಾವ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಇದ್ದರು.

ಕೊಡ್ಲಿಪೇಟೆಯಲ್ಲಿ ಅಪ್ಪಚ್ಚು ರಂಜನ್ ಬಿರುಸಿನ ಪ್ರಚಾರ

ಕೊಡ್ಲಿಪೇಟೆ: ಬಸವ ಜಯಂತಿ ಪ್ರಯುಕ್ತ ಪಟ್ಟಣದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಮಡಿಕೇರಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್, ನಂತರ ವೀರಭಧ್ರೆಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ನೂರಾಒಂದು ತೆಂಗಿನಕಾಯಿಗಳನ್ನು ಒಡೆಯುವ ಮೂಲಕ ಪೂಜೆ ಸಲ್ಲಿಸಿದರು.
ಪಟ್ಟಣದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅಪ್ಪಚ್ಚು ರಂಜನ್ ಕಿರಿಕೊಡ್ಲಿ ಶಾಲೆ ಬಳಿ, ಕೇರಗನಹಳ್ಳಿ ವೆಟನರಿ ಆಸ್ಪತ್ರೆ ಹತ್ತಿರ, ಕಲ್ಲುಕೋರೆ, ದೊಡ್ಡಕೊಡ್ಲಿ, ಬೆಸೂರು, ಕಟ್ಟೆಪುರ, ಚಿಕ್ಕಭಂಡಾರ, ಚಿಕ್ಕಕುಂಧ, ಕೂಡಲೂರು, ದೊಡ್ಡಭಂಡಾರ, ನೀರುಗುಂಧ, ಬ್ಯಾಡಗೋಟ್ಟ ಪೋಸ್ಟ್, ಬೆಂಬಳೂರು, ಊರುಗುತ್ತಿ, ಕ್ಯಾತೆ, ಕವಡಿಕೊಟ್ಟೆ ಮುಂತಾದ ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತಾನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಎಸ್. ಜಿ. ಮೇದಪ್ಪ, ಬಿಜೆಪಿ ನಾಯಕರಾದ ಅಭಿಮನ್ಯು ಕುಮಾರ್, ಭರತೇಶ್ ಮುಂತಾದವರು ಸಭೆಗಳಲ್ಲಿ ಮಾತಾನಾಡಿದರು.

ಕಾಂಡಂಡ ಜಯ ಕರುಂಬಯ್ಯ, ಸಹಕಾರಿಗಳು: ನಾಪೋಕ್ಲು. Napoklu

ಕಾಂಡಂಡ ಜಯ ಕರುಂಬಯ್ಯ, ಸಹಕಾರಿಗಳು: ನಾಪೋಕ್ಲು. Napoklu

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಡಂಡ ಜಯ ಕರುಂಬಯ್ಯನವರು  ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವೆಸ್ಟ್‌ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುವ ಮೂಲಕ ಕಾಂಡಂಡ ಜಯ ಕರುಂಬಯ್ಯನವರು ಸರಿ ಸುಮಾರು 15 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ಪ್ರಶಂಸಿದ  ಗ್ರಾಮದ ಜನತೆಯ ಒತ್ತಾಸೆಯ ಮೇರೆಗೆ ಕಳೆದ 8 ವರ್ಷಗಳಿಂದ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಪ್ರಸ್ತುತ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

“ಸರ್ಚ್‌ ಕೂರ್ಗ್‌ ಮೀಡಿಯಾ” ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಕಾಂಡಂಡ ಜಯ ಕರುಂಬಯ್ಯನವರು ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭದ ಹಾದಿಯಲ್ಲಿ ಸಾಗುತ್ತಿದ್ದು, ಸಂಘದಿಂದ  ಏಕರೆಗೆ 60,000/- ದಂತೆ  3 ಲಕ್ಷಗಳವರಗೆ ಶೇಕಡ 0% ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲಾಗುವುದು.  ಗೋದಾಮು ನಿರ್ಮಾಣಕ್ಕೆ ಏಕರೆಗೆ ಶೇಕಡ 3% ಬಡ್ಡಿ ದರದಲ್ಲಿ 60,000/-ದವರಗೆ  ಸಾಲ, ಕಾಂಕ್ರಿಟ್‌ ಕಾಫಿ ಕಣ ನಿರ್ಮಾಣಕ್ಕೆ ಏಕರೆಗೆ ಶೇಕಡ 3% ಬಡ್ಡಿ ದರದಲ್ಲಿ 60,000/-ದವರಗೆ ಗರಿಷ್ಠ 3 ಲಕ್ಷದವರಗೆ ಸಾಲ, ಹನಿ ನೀರಾವರಿಗೆ ಸಾಲ, ಹೊಸ ಕೆರೆ ನಿರ್ಮಾಣಕ್ಕೆ ಶೇಕಡ 6% ಬಡ್ಡಿ ದರದಲ್ಲಿ 60,000/- ವರಗೆ ಸಾಲ, ಕೆರೆ ಹೂಳೆತ್ತಲು ಶೇಕಡ 6% ಬಡ್ಡಿ ದರದಲ್ಲಿ 30,000/- ವರಗೆ ಸಾಲ, ಕೆಸಿಸಿ ಸಾಲ ಪಡೆದಿರುವವರು 25,000/- ಜಾಮೀನು ಸಾಲ ಪಡೆಯಬಹುದು ಹಾಗೆ ಕೆಸಿಸಿ ಸಾಲ ಪಡೆಯದವರು 15,000/- ಜಾಮೀನು ಸಾಲ ಪಡೆಯಬಹುದು. ಪಿಗ್ಮಿ ಆಧಾರಿತ ಸಾಲ, ಗೃಹ ಬಳಕೆ ಉಪಕರಣಗಳಾದ ಯು.ಪಿ.ಎಸ್ ಹಾಗೂ ಸೋಲಾರ್ ಖರೀದಿಗೆ ಸಾಲ, ಆಭರಣ ಸಾಲ, ಶೇಕಡ 9% ಬಡ್ಡಿದರದಲ್ಲಿ ವಾಹನ ಸಾಲ, ಸ್ವಸಹಾಯ ಸಂಘಗಳಿಗೆ ಹಾಗೂ ಜಂಟಿ ಭಾದ್ಯತ ಗುಂಪುಗಳಿಗೆ ಶೇಕಡ 13% ಬಡ್ಡಿದರದಲ್ಲಿ ಸಾಲ, ಸಂಘದ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಆಧುನಿಕ ಅಕ್ಕಿ ಗಿರಣಿ, ಗೊಬ್ಬರ ಮಳಿಗೆಯ ಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟ, ಪೈಂಟ್ಸ್‌ ಮಾರಾಟ, ಕಾಫಿ ಕೊಯ್ಯಲು ಹಾಗೂ ಕಾಫಿ ಒಣಗಿಸಲು ಟಾರ್ಪಾಲ್‌ಗಳ ಮಾರಾಟ, ಕ್ರಿಮಿನಾಶಕಗಳ ಮಾರಾಟ, ಮದ್ದು ಗುಂಡುಗಳ ಮಾರಾಟ, ಮೋದಿಕೇರ್‌ ಮಾರಾಟ ಮಳಿಗೆ ಜೆರಾಕ್ಸ್‌, ಇ-ಸ್ಟ್ಯಾಂಪಿಂಗ್ ವ್ಯವಸ್ಥೆ‌, ಮುಂತಾದವುಗಳಿಂದ ಸಹಕಾರ ಸಂಘಕ್ಕೆ ಆದಾಯ ಬಂದಿದೆ. ಹಾಗೆ ಸದಸ್ಯರು ಸಂಘದಿಂದ ಪಡೆದ ಸಾಲಗಳನ್ನು ಸಕಾಲದಲ್ಲಿ ಮರುಪಾವತಿ ಮಾಡಿರುವುದರಿಂದ ಸಂಘವು ಲಾಭವನ್ನು ಗಳಿಸಿ ಪ್ರಗತಿ ಪಥದತ್ತ ಸಾಗುತ್ತಿದೆ ಎಂದು ತಿಳಿಸಿದರು. ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸದಸ್ಯರಿಗೆ ಡಿವೆಡೆಂಟ್‌ ಶೇಕಡ 13%  ನೀಡಲಾಗುತ್ತಿದೆ. ಎಂದು ಈ ಸಂದರ್ಭದಲ್ಲಿ ಜಯ ಕರುಂಬಯ್ಯನವರು ತಿಳಿಸಿದರು.

ಈ ಹಿಂದೆ ನಾಪೋಕ್ಲು ಭಾಗದ ಜನತೆ ಭತ್ತ ಮಿಲ್‌ ಮಾಡಲು ಮಡಿಕೇರಿ ಅಥವಾ ಮೂರ್ನಾಡಿಗೆ ತೆರಳುತ್ತಿದ್ದರು ಇದರಿಂದ ಜನತೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದದನ್ನು ಮನಗಂಡ ನಮ್ಮ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಆಧುನಿಕ ಅಕ್ಕಿ ಗಿರಣಿಯೊಂದನ್ನು ಬೇತು ಗ್ರಾಮದಲ್ಲಿ ಸ್ಥಾಪಿಸಲಾಯಿತು ಎಂದ ಜಯ ಕರುಂಬಯ್ಯನವರು, ಇದರಿಂದ ನಾಪೋಕ್ಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ ಹಾಗೆ ರೈತರಿಗೆ ಸಂಘದ ವತಿಯಿಂದ ರಿಯಾತಿ ದರದಲ್ಲಿ ಟ್ರಾಕ್ಟರ್ ನ್ನು ಬಾಡಿಗೆ ನೀಡಲಾಗುತ್ತಿದೆ, ಎಂದು ತಿಳಿಸಿದರು. 

ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 9ಸೆಂಟ್‌ ಜಾಗದಲ್ಲಿ ಸುಸಜ್ಜಿತ ಆಡಳಿತ ಕಛೇರಿ, ಸಭಾಂಗಣ, ಕೃಷಿ ಪರಿಕರಗಳ ಮಾರಾಟ ಮಳಿಗೆ, ಗೋದಾಮು ಹಾಗೂ ವಾಣಿಜ್ಯ ಮಳಿಗೆಗಳನ್ನು ಹೊಂದಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿ ಪಡಿಸಿ ಪ್ರಗತಿಯತ್ತ ಕೊಂಡೊಯ್ಯೊಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ ಜಯ ಕರುಂಬಯ್ಯನವರು, ನಾಪೋಕ್ಲು ಪಟ್ಟಣದ ಬೇತು ರಸ್ತೆಯಲ್ಲಿರುವ ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಾಗದಲ್ಲಿ ಸುಸಜ್ಜಿತ ಹಾರ್ಡ್‌ವೇರ್‌ ಮಾರಾಟ ಮಳಿಗೆ,  ಸಿಮೆಂಟ್ ಮತ್ತು ಉಕ್ಕಿನ ದಾಸ್ತಾನು ಮಾರಾಟ ಮಳಿಗೆಯನ್ನು, ಅದೇ ರೀತಿ ಅದರ ಪಕ್ಕದಲ್ಲಿ ಸುಸಜ್ಜಿತ ಅತಿಥಿಗೃಹ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದೆ ಎಂದು ತಿಳಿಸಿದರು. 

ಉತ್ತಮ ಆಡಳಿತ ನಿರ್ವಹಣೆಗೆ ಕೊಡಗು ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕಿನಿಂದ ಪ್ರಶಸ್ತಿಯನ್ನು ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಡೆದಿದೆ ಹಾಗೆ ನೋಟು ಎಣಿಸುವ ಯಂತ್ರ ಹಾಗೂ ಕಂಪೂಟರ್‌ ಒಂದನ್ನು ಉಡುಗೊರೆಯಾಗಿ ಪಡೆದಿದೆ. ನಾಪೋಕ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಜಯ ಕರುಂಬಯ್ಯನವರು ಈ ಸಂದರ್ಭದಲ್ಲಿ ತಿಳಿಸಿದರು.

ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಬಹುಮತದ ಬದಲು ಸರ್ವಾನುಮತ ಸಹಕಾರ ಕ್ಷೇತ್ರದಲ್ಲಿ ಇರಬೇಕು  ಎಂದು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಜಯ ಕರುಂಬಯ್ಯನವರು ವ್ಯಕ್ತಪಡಿಸಿದ್ದರು. 

ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ರಾಜಕೀಯ ರಹಿತವಾಗಿ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ಜಯ ಕರುಂಬಯ್ಯನವರು  ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.

ಸಹಕಾರ ಕ್ಷೇತ್ರದಲ್ಲಿ ವೆಸ್ಟ್‌ ಕೊಳಕೇರಿ ವಿವಿದ್ದೋದ್ದೆಶ ಸಹಕಾರ ಧವಸ ಭಂಡಾರ ಇದರ ಸದಸ್ಯರಾಗಿ, ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಸದಸ್ಯರಾಗಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಬಿ.ಜೆ.ಪಿಯ ಹಿರಿಯ ಕಾರ್ಯಕರ್ತರಾಗಿದ್ದಾರೆ. ಸಾಮಾಜಿಕ  ಕ್ಷೇತ್ರದಲ್ಲಿ  1996 ರಿಂದ 2003ರವರಗೆ ವೆಸ್ಟ್‌ ಕೊಳಕೇರಿ ಗ್ರಾಮಾಭಿವೃದ್ಧಿ ಸಂಘದ ಆಡಳಿತ ಮಂಡಳಿಯ  ಕಾರ್ಯದರ್ಶಿಯಾಗಿ ಸೇವೆ. 2016 ರಿಂದ ಪ್ರಸ್ತುತ ಖಜಾಂಚಿಯಾಗಿ ಹಾಗೂ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1998 ರಿಂದ 2021ರವರಗೆ ನಾಲ್‌ನಾಡ್‌ ಪ್ಲಾಂಟರ್ಸ್‌ ರಿಕ್ರಿಯೇಷನ್‌ ಅಸೋಸಿಯೇಷನ್(ರಿ) ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್‌ನಾಡ್‌ ಪ್ಲಾಂಟರ್ಸ್‌ ರಿಕ್ರಿಯೇಷನ್‌ ಅಸೋಸಿಯೇಷನ್(ರಿ) ಅಧ್ಯಕ್ಷರಾಗಿದ್ದ ಸಂದರ್ಭ  ನಾಪೋಕ್ಲು ಪಟ್ಟಣದಲ್ಲಿ 84 ಸೆಂಟ್‌ ಜಾಗವನ್ನು ಖರೀದಿಸಿ ಸಂಘದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಾಂಡಂಡ ಕುಟುಂಬ ಸಮಿತಿಯ ಗೌರವ ಕಾರ್ಯದರ್ಶಿಯಾಗಿ ಕಳೆದ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಧಾರ್ಮಿಕ ಕ್ಷೇತ್ರದಲ್ಲಿ ವೆಸ್ಟ್‌ ಕೊಳಕೇರಿ ಭಗವತಿ ದೇವಾಲಯದ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಮೂಲತಃ ಕೃಷಿಕರಾಗಿರುವ ಕಾಂಡಂಡ ಜಯ ಕರುಂಬಯ್ಯನವರು ಈಗಿನ ಟಾಟಾ ಕಾಫಿ ಲಿಮಿಟೆಡ್‌ ಈ ಹಿಂದಿನ ಕನ್ಸಾಲಿಡೇಟೆಡ್‌ ಕಾಫಿ ಲಿಮಿಟೆಡ್‌ನ ಸೂಪರ್‌ವೈಸರ್ ಆಗಿ ಸೇವೆ ಸಲಿಸಿದ್ದಾರೆ. ಹಾಗೆ ಉತ್ತಮ ಹಾಕಿ ಆಟಗಾರರಾಗಿದ್ದಾರೆ. ಇವರ ತಂದೆ ದಿವಂಗತ‌ ಕಾಂಡಂಡ ಕರುಂಬಯ್ಯ ಚಂಗಪ್ಪ, ತಾಯಿ ಗೌರಮ್ಮ, ಪತ್ನಿ ಸುನೀತಾ ಗೃಹಿಣಿ ಹಾಗೂ ಪ್ರವಾಸೋದ್ಯಮಿಯಾಗಿದ್ದಾರೆ. ಹಿರಿಯ ಮಗಳು ಐಶ್ವರ್ಯ ಎಂ.ಬಿ.ಎ. ಪದವೀಧರರಾಗಿದ್ದು, ಇದೀಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಎರಡನೇ ಮಗಳು ಶಿರೀನ್‌ ಮುತ್ತಮ್ಮ ಬಿ.ಕಾಂ. ಪದವೀಧರಾಗಿದ್ದು ಅವರು ಕೂಡ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಕಿರಿಯ ಮಗ ಶುಭಂ ದೇವ್‌ ಮುತ್ತಣ್ಣ  ವ್ಯಾಸಂಗ ನಿರತರಾಗಿದ್ದಾರೆ.

ಕಾಂಡಂಡ ಜಯ ಕರುಂಬಯ್ಯನವರು ಪ್ರಸ್ತುತ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವೆಸ್ಟ್‌ ಕೊಳಕೇರಿ  ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ. ಇವರ ಕೌಟುಂಬಿಕ ಜೀವನವು,  ಸಹಕಾರ, ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 03-04-2023

Search Coorg Media

Coorg’s Largest Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

ಪಟ್ರಪಂಡ ಮೋಹನ್‌ ಮುದ್ದಪ್ಪ, ಸಹಕಾರಿಗಳು: ನಾಪೊಕ್ಲು

ಪಟ್ರಪಂಡ ಮೋಹನ್‌ ಮುದ್ದಪ್ಪ, ಸಹಕಾರಿಗಳು: ನಾಪೊಕ್ಲು. Napoklu

 

ಪಟ್ರಪಂಡ ಮೋಹನ್‌ ಮುದ್ದಪ್ಪನವರು ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಾಪೋಕ್ಲು ನಾಡು ಗ್ರಾಹಕರ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ಚ್‌ ಕೂರ್ಗ್‌ ಮೀಡಿಯಾವು “ ಕೊಡಗು ಸಹಕಾರ ದರ್ಶನ” ಎಂಬ ಕೊಡಗಿನ ಸಹಕಾರ ಕ್ಷೇತ್ರದ ಸಮಗ್ರ ಪರಿಚಯದ ಡಿಜಿಟಲ್‌ ದಾಖಲಾತಿಯ ಕುರಿತು ಹಿರಿಯ ಸಹಕಾರಿಗಳಾದ ಪಟ್ರಪಂಡ ಮೋಹನ್‌ ಮುದ್ದಪ್ಪನವರನ್ನು ಸಂದರ್ಶಿಸಿ ಮಾಹಿತಿಯನ್ನು ಕಲೆ ಹಾಕಿತ್ತು. ಆ ಸಂದರ್ಭ ನಮ್ಮೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡ ಪಟ್ರಪಂಡ ಮೋಹನ್‌ ಮುದ್ದಪ್ಪನವರ ಮಾತುಗಳನ್ನು ಅವರದೇ ದಾಟಿಯಲ್ಲಿ ಕೇಳೋಣ

“ನಾನು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಮುಖ್ಯ ಪ್ರೇರಣೆಯೆಂದರೆ ಅದು ಈ ಮೊದಲು ಕೊಳಕೇರಿ ಧವಸ ಬಂಢಾರದಲ್ಲಿ 15 ವರ್ಷಗಳಿಂದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು. ಅಲ್ಲಿ ನನ್ನ ಕಾರ್ಯಪ್ರವೃತ್ತಿಯನ್ನು ನೋಡಿದ ನಾಪೋಕ್ಲು ನಾಡು ಸಹಕಾರ ಸಂಘದ ಸದಸ್ಯರು ಅವನತಿಯ ಹಂತದಲ್ಲಿದ್ದ ಸಹಕಾರ ಸಂಘವನ್ನು ಅಭಿವೃದ್ಧಿ ಪಥದಲ್ಲಿ ನೀವು ಮುನ್ನಡೆಸಬೇಕೆಂದು ಅಪೇಕ್ಷೆ ಪಟ್ಟರು. ಹಾಗಾಗಿ ಸದಸ್ಯರ ಒತ್ತಾಸೆಯ ಜೊತೆ ನಾನು ಚುಣಾವಣೆಯಲ್ಲಿ ಸ್ಫರ್ಧಿಸಿ ಅಧ್ಯಕ್ಷನಾಗಿ ಆಯ್ಕೆಯಾದೆ.

 

ಪ್ರಸ್ತುತ ಕಳೆದ 15 ವರ್ಷಗಳಿಂದ ನಾಪೋಕ್ಲು ನಾಡು ಸಹಕಾರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತದ್ದೇನೆ ಜೊತೆಗೆ ಕಳೆದ 20 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ಅಧ್ಯಕ್ಷನಾಗಿ ಆಯ್ಕೆಯಾದ ಸಂದರ್ಭದಲ್ಲಿ ಬೀಳುವ ಹಂತದಲ್ಲಿದ ಸಂಘದ ವಾಣಿಜ್ಯ ಕಟ್ಟಡವನ್ನು ಕೆಡವಿ ಸುಮಾರು 50 ಲಕ್ಷ ವೆಚ್ಚದಲ್ಲಿ ನೂತನ ವಾಣಿಜ್ಯ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ನನ್ನ ಈ ಪ್ರಯತ್ನಕ್ಕೆ ಆಡಳಿತ ಮಂಡಳಿ, ಸದಸ್ಯರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಸಹಕಾರ ಹೆಚ್ಚಿನದಾಗಿದೆ. 

ಪ್ರಸ್ತುತ ನಾಪೋಕ್ಲು ನಾಡು ಸಹಕಾರ ಸಂಘವು ಲಾಭದಲ್ಲಿದ್ದು, ಇದಕ್ಕೆ ಮುಖ್ಯ ಕಾರಣ ನೂತನವಾಗಿ ನಿರ್ಮಿಸಿದ ವಾಣಿಜ್ಯ ಕಟ್ಟಡ ಮಳಿಗೆಗಳನ್ನು ಬಾಡಿಗೆಗೆ ನೀಡಿದ್ದು ಹಾಗೂ ಸಂಘದ ಸ್ವಂತ ವಾಣಿಜ್ಯ ಮಳಿಗೆಯಲ್ಲಿ ಗ್ರಾಹಕರಿಗೆ ಅವಶ್ಯಕತೆಯಿರುವ ವಸ್ತುಗಳಾದ ಬಟ್ಟೆ, ಸ್ಟೀಲ್‌, ಕೊಡೆ, ಅಲ್ಯೂಮೀನಿಯಂ, ಪ್ಲಾಸ್ಟಿಕ್‌ ವಸ್ತುಗಳ ಮಾರಾಟ, ಮತ್ತು ಸರ್ಕಾರದ ನ್ಯಾಯಬೆಲೆ ಅಂಗಡಿಯನ್ನು ನಡೆಸುತ್ತಿರುವುದಾಗಿದೆ.

ನನ್ನ ಮುಂದಿನ ಕ್ರಿಯಾಯೋಜನೆಯೆಂದರೆ ಒಂದು ಸುಸಜ್ಜಿತವಾದ ಗೋದಾಮು ನಿರ್ಮಾಣ, ಹಾಗೂ ಕೃಷಿ ಪರಿಕರಗಳ ಮಾರಾಟ ಮಳಿಗೆ, ಕಟ್ಟಡ ನಿರ್ಮಾಣಕ್ಕೆ ಬೇಕಾದ ಕಬ್ಬಿಣ, ಸೀಮೆಂಟ್‌ ಮುಂತಾದವುಗಳ ಮಾರಾಟ ಮಳಿಗೆ. ಜೊತೆಗೆ ಸಾರ್ವಜನಿಕರಿಗಾಗಿ ಸುಸಜ್ಜಿತ ಸಭಾಂಗಣ ಇದಕ್ಕಾಗಿ 10 ಸೆಂಟ್‌ ಜಾಗವನ್ನು ಕಾಯ್ದಿರಿಸಲಾಗಿದೆ. 

ಮುಂದಿನ ಸಂಘದ ಚುನಾವಣೆಯಲ್ಲಿ ಸ್ವರ್ಧಿಸುವ ಇಚ್ಛೆಯಿದ್ದು, ಅದಕ್ಕೆ ಸದಸ್ಯರ ಒತ್ತಾಸೆಯು ಇದೆ, ಸಂಘವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಕೊಂಡೊಯ್ಯುದು, ತದನಂತರ ಯುವಕರಿಗೆ ಅವಕಾಶವನ್ನು ಕೊಡಲು ತೀರ್ಮಾನಿಸಿದ್ದೇನೆ.

ಸಹಕಾರ ಕ್ಷೇತ್ರದಲ್ಲಿ ಪಾರದರ್ಶಕ ಆಡಳಿತ, ನಿಸ್ವಾರ್ಥ ಸೇವೆ ಇದ್ದರೆ ಸಹಕಾರ ಕ್ಷೇತ್ರವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾ ಅಭಿವೃದ್ಧಿಯತ್ತ ಸಾಗಲು ನನ್ನ ಸಲಹೆಯಾಗಿದೆ.

ಸಹಕಾರ ಕ್ಷೇತ್ರದಲ್ಲಿ ಭಾವೀ ಯುವಶಕ್ತಿಯ ಭಾಗವಹಿಸುವಿಕೆ ಇದ್ದು, ಅದು ಹಾಗೇ ಮುಂದುವರೆಯಬೇಕು, ಹೆಚ್ಚು ಹೆಚ್ಚು ಯುವಕರು ಸಹಕಾರ ಸಂಘದ ಸದಸ್ಯರಾಗಬೇಕು ಎಂಬುದು ನನ್ನ ಅಭಿಲಾಷೆಯಾಗಿದೆ.

ರಾಜಕೀಯವಾಗಿ ನಾನು ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿದ್ದೇನೆ. ಸಾಮಾಜಿಕ ಕ್ಷೇತ್ರದಲ್ಲಿ ಲಯನ್ಸ್‌ ಕ್ಲಬ್‌ ನಾಪೋಕ್ಲುವಿನ ಸದಸ್ಯನಾಗಿದ್ದೇನೆ. ಜೊತೆಗೆ ಮೂಟೇರಿಯ ಪೊನ್ನಾಡ್‌ ರೈತ ಉತ್ಪಾದಕ ಸಂಘದ(ಎಫ್‌.ಪಿ.ಸಿ.ಎಲ್‌) ಅಧ್ಯಕ್ಷನಾಗಿದ್ದೇನೆ. ಧಾರ್ಮಿಕ ಕ್ಷೇತ್ರದಲ್ಲಿ ಕೊಳಕೇರಿ ಮೂಟೇರಿ ಭಗವತಿ ಉಮಾ ಮಹೇಶ್ವರಿ ಆಡಳಿತ ಮಂಡಳಿಯ ಸದಸ್ಯನಾಗಿದ್ದೇನೆ.

ನನ್ನ ಕುಟುಂಬದ ಬಗ್ಗೆ ತಿಳಿಸುವುದಾದರೆ ನಾನು ಮೂಲತ: ಕೃಷಿ ಕುಟುಂಬಕ್ಕೆ ಸೇರಿದವನು. ತಂದೆ: ದಿ. ಪಟ್ರಪಂಡ ಅಪ್ಪಯ್ಯ, ತಾಯಿ: ಮಾಚಮ್ಮ, ಪತ್ನಿ: ಕಾವೇರಮ್ಮ(ಗೃಹಿಣಿ), ಪುತ್ರ: ಅಯ್ಯಪ್ಪ (ಕೃಷಿಕ, ಉದ್ಯಮಿ) 2ನೇ ಪುತ್ರ ಕಾರ್ಯಪ್ಪ (ಕೃಷಿಕ). ಪ್ರಸ್ತುತ ನಾನು  ನಾಪೋಕ್ಲು ಗ್ರಾ.ಪಂ ವ್ಯಾಪ್ತಿಯ ಕೋಳಕೇರಿಯ ಮೂಟೇರಿ ಗ್ರಾಮದ ನಿವಾಸಿಯಾಗಿದ್ದೇನೆ.”

 

ಶ್ರೀಯುತ ಪಟ್ರಪಂಡ ಮೋಹನ್‌ ಮುದ್ದಪ್ಪನವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ ಮುಂದುವರೆಯಲಿ ಎಂದು “ಸರ್ಚ್‌ ಕೂರ್ಗ್ ಮೀಡಿಯಾ” ವು  ಹಾರೈಸುತ್ತದೆ.

ಸಂದರ್ಶನ ದಿನಾಂಕ: 06 – 03 – 2023

Search Coorg Media

Coorg’s Largest Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

Test Business

Test Business

Profile Picture
Contact
Address: B.M. Road, Near Tavarekere, Kushalnagar – 571234, Kodagu (Coorg)
Mob: 9448072824, 9036020724, 9731306466
Email: durgaceramicskushalnagar@gmail.com
About
Santhosh (Owner)
Our Services

Main Distributors For Naveen Vitrified Tiles, Kajaria Nitco Ceramics, Hindware Sanitary, Jaquar Fittings Etc.

Main Brand
Working Hours
Week days: 9.00 AM To 6.00 PM
Sunday Holiday
Gallery

ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಮಾಯಮುಡಿ. Mayamudi Primary Agricultural Credit Co-operative Society LTD., (PACCS-Mayamudi)

ನಂ. 2770ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಮಾಯಮುಡಿ.‌

 

# 1. ಪ್ರಾಸ್ತವಿಕ:-

# 2. ಸಂಘದ ಕಾರ್ಯವ್ಯಾಪ್ತಿ:- 

# 3. ಸಂಘದ ಕಾರ್ಯಚಟುವಟಿಕೆಗಳು:-

# 4. ಅಭಿವೃದ್ಧಿಯ ಮುನ್ನೋಟ:-

# 5 ಸಂಘದ ಸದಸ್ಯತ್ವ:- 

# 6. ಪಾಲು ಬಂಡವಾಳ:-

# 7. ಠೇವಣಿಗಳು:-

# 8. ನಿಧಿಗಳು :- 

# 9. ಧನವಿನಿಯೋಗಗಳು:- 

# 10. ಸದಸ್ಯರಿಗೆ ವಿತರಿಸಿದ ಸಾಲ:- 

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

# 16. ಆಡಿಟ್ ವರ್ಗ:- 

# 17. ಸಂಘದ ಸ್ಥಿರಾಸ್ತಿಗಳು:- 

# 18. ಸಂಘದ ಆಡಳಿತ ಮಂಡಳಿ:-

# 19. ಸಂಘದ ಸಿಬ್ಬಂದಿ ವರ್ಗ:-

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

Search Coorg Media

Coorg’s Largest Online Media Network